ಸುದ್ದಿಬಿಂದು ಬ್ಯೂರೋ
ಕುಮಟಾ : ಸ್ಕೂಟಿ ಸವಾರ ನೋರ್ವ ಎದುರಿಗೆ ಬಂದ ನಾಯಿಗಳನ್ನ ತಪ್ಪಿಸಲು ಹೋಗಿ ಸ್ಕೂಟಿ ಪಲ್ಟಿಯಾಗಿದ್ದು, ಸ್ಕೂಟಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ‌ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ‌ ನಡೆದಿದೆ
.

ಅಪಘಾಯದಲ್ಲಿ ಬೈಕ್ ಸವಾರ ಹರೀಶ ರಾಮ ಪಡ್ತಿ( 26), ಹಿಂಬದಿ ಸವಾರ ಮೋಹನ್ ಕಂತ್ರಿ ಪಡ್ತಿ(55) ಗಾಯಗೊಂಡಿದ್ದಾರೆ.‌ಗಾಯಗೊಂಡವರು ಕೋಳಿಮಂಜಗುಣಿ‌ ನಿವಾಸಿಯಾಗಿದ್ದಾರೆ.‌ ಇವರು ಕುಮಟಾದಿಂದ‌ ಕೋಳಿ ಮಂಜಗುಣಿಯಲ್ಲಿರುವ ಮನೆಗೆ ಹೋಗುತ್ತಿದ್ದು, ಈ ವೇಳೆ ಬರ್ಗಿ ಬಸ್ ತಂಗುದಾಣದ ಸಮೀಪ ಎದುರಿಗೆ ನಾಯಿ ಬಂದಿದ್ದು, ಅದನ್ನ ತಪ್ಪಿಸಲು ಹೋಗಿ ಸ್ಕೂಟಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.

ಇದರಿಂದಾಗಿ ಸ್ಕೂಟಿ ಹಿಂಬದಿ ಸವಾರ ಮೋಹನ್‌ ಅವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುಗ ಮೋಹನ್ ಅವರನ್ನ ಕುಮಟಾ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅರ್ಧಗಂಟೆಯಾದರು ಬಾರದ 108
ಅಪಘಾತವಾದ ಸ್ಥಳದಿಂದ ಕೇವಲ ಮೂರು‌ ನಾಲ್ಕು ಕಿಲೋ‌ಮಿಟರ ದೂರದ ಹಿರೇಗುತ್ತಿ ಚೆಕ್ ಪೊಸ್ಟ್ ಬಳಿ 108 ವಾಹನ ಇದ್ದರೂ ಅಪಘಾತವಾದ ತಕ್ಷಣ ಸ್ಥಳೀಯರು ಪೋನ್ ಮಾಡಿ ಕರೆ ಮಾಡಿ ಅರ್ಧ ಗಂಟೆಯಾದರೂ ಸಹ 108ವಾಹನ ಸ್ಥಳಕ್ಕೆ ಆಗಮಿಸಿರಲಿಲ್ಲ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಅವರ ತಲೆಯಿಂದ ರಕ್ತಸ್ರಾವದಿಂದ ಅರ್ಧಗಂಟೆಗಳ‌‌ ಕಾಲ ಹೆದ್ದಾರಿಯಲ್ಲಿ ಬಿದ್ದಿದ್ದಾರೆ. ಇದಕ್ಕೆ ಸ್ಥಳೀಯರು ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ.