suddibindu.in
ಕುಮಟಾ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಸಮೀದಲ್ಲಿ ಗುಡ್ಡಕುಸಿತ ಉಂಟಾಗಿ ಹೆದ್ದಾರಿಯಲ್ಲಿ ಬಿದ್ದಿದೆ.ಇದರಿಂದಾಗಿ ಅಂಕೋಲಾ ಕುಮಟಾ ಬಳಿ ವಾಹನ ಸಂಚಾರ ಬಂದ್ ಆಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ
- ವಾಯುವ್ಯ ಕರ್ನಾಟಕ ಸಾರಿಗೆ ಶಿರಸಿ ವಿಭಾಗದಲ್ಲಿ ಚಾಲಕರ ನೇಮಕಾತಿಗೆ ಅರ್ಜಿ ಆಹ್ವಾನ
- 21 ವರ್ಷ ಪೂರೈಸಿದ ಆರ್.ವಿ. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ : ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ.!
- ಮಾಧ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಲಿದೆ : ಮಹಾಬಲ ಸೀತಾಳಬಾವಿ
ಸ್ಥಳಕ್ಕೆ ಐಆರ್‌ಬಿ ಕಂಪನಿಯ ಜೆಸಿಬಿಯಿಂದ ಇದೀಗ ತೆರವು ಕಾರ್ಯ ಮುಂದುವರೆದಿದ್ದು, ವಾಹನ ಸವಾರರಲ್ಲಿ ಆತಂಕ ಹೆದ್ದಾಗಿದೆ.
ಇನ್ನೂ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತದಲ್ಲಿ ಮೃತಪಟ್ಟಿದ್ದ ಪುಟ್ಟ ಬಾಲಕಿ ಅವಾಂತಿಕ ಮೃತ ದೇಹ ಇಂದು ಬೆಳಿಗ್ಗೆ ಗೋಕರ್ಣ ಸಮೀಪದಲ್ಲಿ ಪತ್ತೆಯಾಗಿದೆ. ಶಿರೂರು ಬಳಿ ಹೆದ್ದಾರಿಯಲ್ಲಿನ ಮಣ್ಣು ತೆರವು ಕಾರ್ಯಚರಣೆ ಇಂದು ಬೆಳಿಗ್ಗೆಯಿಂದ ಮುಂದುವರೆದಿದೆ.