suddibindu.in
Ramnagar:ರಾಮನಗರ : ಫಾರ್ಚೂನರ್ ಕಾರು(Fortuner car)ಲಾರಿ ನಡುವ ನಡೆದ ಭೀರ ರಸ್ತೆ ಅಪಘಾತದಲ್ಲಿ ಇಬ್ಬರೂ ವಿದ್ಯಾರ್ಥಿಗಳು ಸ್ಥಳದಲ್ಲೆ ಮೃತಪಟ್ಟಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನ ಬೆಂಗಳೂರು-ಮೈಸೂರು(Bengaluru Mysore highway)ದಶಪಥ ಹೆದ್ದಾರಿಯ ಕಪನಯ್ಯನದೊಡ್ಡಿ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ

ಅಪಘಾತದಲ್ಲಿ ವಿಶ್ವ (21), ಸೂರ್ಯ (21), ಮೃತ ವಿದ್ಯಾರ್ಥಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕ ಸುಹಾಸ್ ಎಂದು ಗುರುತಿಸಲಾಗಿದೆ.ಮೃತ ವಿದ್ಯಾರ್ಥಿಗಳು ಆಂಧ್ರ (Andhra)ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ (engineering student)ವ್ಯಾಸಾಂಗ ಮಾಡುತ್ತಿದ್ದರು.ವಿದ್ಯಾರ್ಥಿಗಳು ಇದ್ದ ಚಲಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ತಡ ರಾತ್ರಿ ಈ ಅಪಘಾತ ನಡೆದಿದೆ. ಕಾರು ಮೈಸೂರಿನಿಂದ‌ ಬೆಂಗಳೂರು ಕಡೆ ಚಲಿಸುತ್ತಿತ್ತು ಎನ್ನಲಾಗಿದೆ.

ಗಂಭೀರ ಗಾಯಗೊಂಡಿರೋ‌ಚಾಲಕ ಸುಹಾಸ್ ಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ರಾಮನಗರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.