suddibindu.in
ಕಾರವಾರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ (actor Darshan ಪೊಲೀಸ ತನಿಖೆ ಎದುರಿಸುತ್ತಿದ್ದು ಈ ನಡುವೆ ಅವರ ಕುಟುಂಬಸ್ಥರು ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೋಗಿದ್ದಾರೆ.ದರ್ಶನ ಅವರ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ ಉತ್ತರ ಕನ್ನಡದ ಕೈಗಾದಲ್ಲಿ ವಿಶೇಷ ಪೂಜೆ (puje) ಸಲ್ಲಿಸಿದ್ದಾರೆ.
ಕೈಗಾದ ಟೌನ್‌ಶಿಪ್‌ನಲ್ಲಿರು kaiga township ರಾಮಲಿಂಗೇಶ್ವರ, ಶನೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಹಾಗೂ ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಬಳಿಕ ಮಾತನಾಡಿದ ಸಹೋದರಿಯ ಪತಿ ಮಂಜುನಾಥ ಘಟನೆ ನಡೆಸಿರುವುದು ಮನಸ್ಸಿಗೆ ನೋವಾಗಿದೆ. ದರ್ಶನ್ ಅವರು ತಮ್ಮ ಸಂಪಾದನೆ ಮಾಡಿರುವ ಕೋಟ್ಯಾಂತರ ರೂಪಾಯಿ ಹಣದಲ್ಲಿ ಮುಕ್ಕಾಲು ಭಾಗವನ್ನು ದಾನ, ಧರ್ಮ ಮಾಡಿದ್ದಾರೆ. ಅವರಷ್ಟಕ್ಕೆ ಅವರು ಸುಮ್ಮನಿದ್ದರೂ ಇರೋದಕ್ಕೆ ಕೊಡುವುದಿಲ್ಲ. ದರ್ಶನ ಅವರು ಜೀವನದಲ್ಲಿ ಮಾಡಿರುವ ಒಳ್ಳೆಯ ಕೆಲಸದಿಂದ, ಒಳ್ಳೆಯ ಕೆಲಸ ದರ್ಶನ್ ಅವರನ್ನು ಕಾಪಾಡುತ್ತಿದೆ. ದರ್ಶನ ಅವರಿಗೆ ಒಳ್ಳೆಯ ಗುಣ ಇದೆ ಎಂದಿದ್ದಾರೆ.