ಸುದ್ದಿಬಿಂದು ಬ್ಯೂರೋ ವರದಿ
Dandeli:ದಾಂಡೇಲಿ : ನಗರದ ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ಜಿಟಿಟಿಸಿ ಕಾಲೇಜು ವಿದ್ಯಾರ್ಥಿ ಅನಾರೋಗ್ಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿ ಹುಬ್ಬಳ್ಳಿಯ ಅನೀಶ್ ಬಿ.ಗಾಣಿಗೇರ ಎಂಬಾತನಾಗಿದ್ದು, ಈತ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದಾನೆ. ಅನೇಕ ದಿನಗಳಿಂದ ಈತನಿಗೆ ಅನಾರೋಗ್ಯ ಕಾಡುತ್ತಿತ್ತು ಎಂದು ಈತನ ಸಹಪಾಠಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗದೆ ವಸತಿ ನಿಲಯದಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದನು. ತೀವ್ರ ಅನಾರೋಗ್ಯಗೊಂಡಿದ್ದ ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರೊಳಗೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಗಮನಿಸಿ