ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಓಂ ಬೀಚ್ ಟೂರಿಸ್ಟ್ ಅಸೋಸೊಯೇಷನ್ ಅವರು ಮೀನುಗಾರಿಕಾ ದೋಣಿಯಲ್ಲಿ ಬೋಟಿಂಗ್ ನಡೆಸುತ್ತಿದ್ದಾರೆ, ಪ್ರವಾಸಿಗರಿಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಗೋಕರ್ಣ ವ್ಯಾಪ್ತಿಯ ಟೂರಿಸ್ಟ್ ಬೋಟ್ ಮಾಲೀಕರ ಸಂಘ ಆರೋಪಿಸಿದೆ.

ಈ ಬಗ್ಗೆ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಗೋಕರ್ಣ ವ್ಯಾಪ್ತಿಯ ಟೂರಿಸ್ಟ್ ಬೋಟ್ ಮಾಲೀಕರ ಸಂಘ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಓಂ ಬೀಚ್ ಟೂರಿಸ್ಟ್ ಅಸೋಸೊಯೇಷನ್‌ನವರು ಕಳೆದ ಅನೇಕ ವರ್ಷಗಳಿಂದ ಸಾಮಾನ್ಯ‌ ಮೀನುಗಾರಿಕಾ ದೋಣಿಯಲ್ಲಿ ಬೋಟಿಂಗ್ ನಡೆಸಿಕೊಂಡು ಬಂದಿದ್ದಾರೆ. ಅಲ್ಲದೆ ಬೋಟಿಂಗ್ ಮಾಡುವ ಪ್ರವಾಸಿಗರಿಗೆ ಯಾವುದೆ ಲೈಪ್ ಜಾಕೇಟ್ ಸಹ ನೀಡುತ್ತಿಲ್ಲ. ಅಲ್ಲದೆ ಇವರಿಗೆ ಕೇವಲ ಒಂದು ಬೋಟ್ ನಡೆಸಲು ಅವಕಾಶ ಇದೆ. ಆದರೆ ಅವರೆ ಹೇಳಿಕೊಂಡಿರುವಂತೆ 22ಬೋಟ್ ನಡೆಸುತ್ತಿದ್ದಾರೆ.

ಗುತ್ತಿಗೆದಾರರಾದ ಗಣೇಶ ಡಿ. ಗಾಂವಕರ ರವರಿಗೆ ಈಗಾಗಲೇ ನೀಡಿರುವುದು ಮೂರು ಬೀಚ್ (ಕುಡ್ಲೆ ಬೀಚ್, ಗೋಕರ್ಣ ಮೇನ್ ಬೀಚ್, ಓಂ ಬೀಚ್) ಈ ಮೂರು ಬೀಚ್‌ಗಳನ್ನು ಕಾರ್ಯ ಆದೇಶದ ಪ್ರಕಾರ ಲೀಸ್ ನೀಡಲಾಗಿದೆ ಹಾಫ್ ಮೂನ್, ಪ್ಯಾರಾಡೈಸ್, ಬೇಲೆಕಾನ್, ತದಡಿ, ನಿರ್ವಹಣಾ ಬೀಚ್ ಈ ಯಾವುದೇ ಬೀಚ್‌ಗಳನ್ನು ಗುತ್ತಿಗೆ ನೀಡಿಲ್ಲ. ಆದರೆ ಓಂ ಅಸೋಸಿಯೇಷನ್‌ ಅಧ್ಯಕ್ಷರಾದ ಚಿದಾನಂದ ಎನ್ ಲಕ್ಕುಮನೆ ಯವರು ಸುಳ್ಳು ಮಾಹಿತಿ ನೀಡಿದ್ದಾರೆ.

ಅವರು ರೂ. 1,07,000 ಹಣವನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಟೆಂಡರ್ ಪ್ರದೇಶ ಗುತ್ತಿಗೆ ಪಡೆದ ಮೂರು ಬೀಚ್ ಪ್ರದೇಶವು ಗಣೇಶ ಡಿ ಗಾಂವಕರ್ ರವರಿಗೆ ಲೀಸ್ ಆಗಿರುತ್ತದೆಯೋ ಅಥವಾ ಓಂ ಬೀಚ್ ಅಸೋಸಿಯೇಷನ್ ಅವರಿಗೆ ಲೀಸ್ ಆಗಿರುತ್ತದೆಯೋ? ಆ ಜಾಗದಲ್ಲಿ ಓಂ ಬೀಚ್ ಅಸೋಸಿಯೇಷನ್‌ರವರು ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿದ್ದಲ್ಲಿ ಗುತ್ತಿಗೆದಾರರಾದ ಗಣೇಶ ಡಿ ಗಾಂವಕರ ರವರು ಉಪಗುತ್ತಿಗೆ ನೀಡಿದ್ದಾರೆಂದು ಅರ್ಥ. ಆದೇಶದ ಪ್ರಕಾರ ಉಪಗುತ್ತಿಗೆ ನೀಡುವಂತಿಲ್ಲ. ನೀಡಿದ್ದಲ್ಲಿ ಟೆಂಡರನ್ನು ರದ್ದುಗೊಳಿಸಬೇಕೆನ್ನುವ ನಿಯಮವಿದೆ..

ಟೆಂಡರ್ ಪ್ರಕರಣೆಯ ಪ್ರಕಾರ ಸಮಿತಿಯವರು ಈ ಮೂರು ಬೀಚ್(ಕುಡ್ಲೆ ಬೀಚ್, ಗೋಕರ್ಣ ಮೇನ್ ಬೀಚ್, ಓಂ ಬೀಚ್) ಗಳನ್ನು ಅದರ ಹೊರತುಪಡಿಸಿ ಉಳಿದ ಸ್ಥಳಕ್ಕೆ ಹೋದಲ್ಲಿ ಟೆಂಡರ್ ಪ್ರಕಟಣೆ ರದ್ದುಪಡಿಸಬೇಕಾಗುತ್ತದೆ ಎಂದು ಹೇಳಿರುತ್ತಾರೆ. ಓಂ ಬೀಚ್ ಅಸೋಸಿಯೇಷನ್‌ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಹಾಗೆ ಹಲವಾರು ವರ್ಷಗಳಿಂದ ಕೆಲವರು ಮೀನುಗಾರಿಕಾ ಬೋಟ್‌ಗಳನ್ನು ತೆಗೆದುಕೊಂಡು ಟೂರಿಸ್ಟ್ ಬೋಟ್‌ಗಳಾಗಿ ಮಾರ್ಪಾಟು ಮಾಡಿ ನಡೆಸುತ್ತಾ ಇರುತ್ತಾರೆ. ಟೆಂಡರ್ ಪ್ರಕಟಣೆಯ ಪ್ರಕಾರ ಮೀನುಗಾರಿಕಾ ಬೋಟ್‌ಗಳನ್ನು ಮಾರ್ಪಾಡಿಸಿ ಟೂರಿಸ್ಟ್ ಬೋಟ್ ಮಾಡಿ ನಡೆಸತಕ್ಕದಲ್ಲ ಎಂದು ಪ್ರಕಟಣೆಯಲ್ಲಿ ಇರುತ್ತದೆ.

ಗುತ್ತಿಗೆದಾರರಾದ ಗಣೇಶ ಡಿ ಗಾಂವಕರ ರವರು ಕೋವಿಡ್ ಸಮಯದಲ್ಲಿ ನನಗೆ ನಷ್ಟ ಉಂಟಾಗಿದೆ ಎಂದು ಸಬೂಬು ಹೇಳಿ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡಿ ನಷ್ಟ ಭರಿಸಲು ಸರಕಾರದಿಂದ ಕೆಲವು ಅಂಗಡಿಗಳನ್ನು ಪಡೆದಿರುತ್ತಾರೆ. ಮತ್ತು ಎಟಿವಿ ಬೈಕ್ ಚಟುವಟಿಕೆ, ರೋಪ್‌ವೇ, ಲಾಕರ್, ಸನ್‌ಬೆಡ್ ತಂಪುಪಾನೀಯ ಅಂಗಡಿ ತೆರೆಯಲು ಹಾಗೂ ಪ್ರವಾಸಿ ಮಾಹಿತಿ ಕೆಂದ್ರ ಇನ್ನಿತರ ಚಟುವಟಿಕೆ ಕೈಗೊಳ್ಳಲು ಅನುಮತಿ ಪಡೆದುಕೊಂಡು ಅವರಿಗಾದ ಮೂರು ವರ್ಷದ ನಷ್ಟವನ್ನು ತುಂಬಿಕೊಂಡಿರುತ್ತಾರೆ. ಆದುದ್ದರಿಂದ ಗಣೇಶ ಡಿಮ ಗಾಂವಕರ ಅವರಿಗೆ ಯಾವುದೇ ಕಾರಣಕ್ಕೆ ಮೂರು ವರ್ಷ ಹೆಚ್ಚಿಸಿಕೊಡಬಾರದೆಂದು ಪತ್ರಿಕಾ ಮಾಧ್ಯಮದ ಮೂಲಕ ಕೇಳಿಕೊಳ್ಳುತ್ತೇವೆ.

ಮಾಹಿತಿ ಹಕ್ಕಿನ ಪ್ರಕಾರ ಗುತ್ತಿಗೆದಾರರಿಗೆ ಒಂದು ಪ್ರವಾಸಿ ಬೋಟನ್ನು ಸಮುದ್ರ ತೀರಕ್ಕೆ ಸಂಚರಿಸಲು ಪರವಾನಗಿ ನೀಡಿದ್ದು ಅದರ ಹೊರತುಪಡಿಸಿ ಗುತ್ತಿಗೆದಾರರು ఓం ‘ಬೀಚ್ ಅಸೋಸಿಯೇಷನ್ ರವರ ಜೊತೆಗೂಡಿ 22 ಬೋಟ್‌ಗಳನ್ನು ಅನಧೀಕೃತವಾಗಿ ನಡೆಸುತ್ತಿದ್ದಾರೆ.

ಆದರೆ ನಾವು ಮೇ ತಿಂಗಳಿಂದ ಬೋಟಿಂಗ್ ನಡೆಸಿಲ್ಲ, ಇವರು ಮಾಡಿರುವ ಪ್ರತಿಯೊಂದು ಆರೋಪ ಸತ್ಯಕ್ಕೆ ದೂರವಾಗಿದೆ. ಇನ್ನೂ ಮೀನುಗಾರಿಕೆಗೆ ಹೋಗಿದ್ದ ವೇಳೆಯಲ್ಲಿ ಬಿದ್ದು ಗಾಯಮಾಡಿಕೊಂಡ ವ್ಯಕ್ತಿಯನ್ನ ತೋರಿಸಿ ಆತ ಬೋಟಿಂಗ್‌ಗೆ ಹೋಗಿದ್ದ ವೇಳೆ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದರು.

ಮೀನುಗಾರಿಕೆಗೆ ಹೋಗಿದ್ದ ವೇಳೆ ಬಿದ್ದಿರುವೆ
ಬೋಟಿಂಗ್‌ಗೆ ಹೋಗಿದ್ದ ವೇಳೆ ಬಿದ್ದು ಗಾಯವಾಗಿತ್ತು. ಆದರೆ ಓಂ ಬೀಚ್ ಟೂರಿಸ್ಟ್ ಅಸೋಸಿಯೇಷನ್‌‌ನವರು ನಾನು ಬೋಟಿಂಗ್‌ಗೆ ಹೋಗಿದ್ದ ಸಂದರ್ಭದಲ್ಲಿ ಬಿದ್ದು ಗಾಯಮಾಡಿಕೊಂಡಿರುವುದಾಗಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ರಾಜು ತಿರಂಗಕರ್ ಸ್ಪಷ್ಟ ಪಡಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷರಾದ ಸಂದೀಪ್, ವಿನಾಯಕ, ರವಿಕಿರಣ ನಾಯ್ಕ, ಪ್ರಕಾಶ, ವಿಜಯ ನಾಯ್ಕ, ಭಾಸ್ಕರ ಹರಿಕಾಂತ, ಸಂದೀಪ್ ಲಕ್ಕುಮನೆ, ಸೇರಿದಂತೆ ಮೊದಲಾದವರು ಹಾಜರಿದ್ದರು..

ಇದನ್ನೂ ಓದಿ