ಸುದ್ದಿಬಿಂದು ಬ್ಯೂರೋ ವರದಿ
Karwar: ಕಾರವಾರ: ಇಲ್ಲಿಯ ಬಾಲಮಂದಿರ ಪ್ರೌಢಶಾಲೆಯಲ್ಲಿ ನಡೆದ “ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವ”ವು ಅತ್ಯಂತ ಅದ್ಧೂರಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿರುದ್ಧ ಹಳದಿಪುರ ಮಾತನಾಡಿ, “ಮೃದು ಕೌಶಲ್ಯ ಮತ್ತು ಕಠೀಣ ಕೆಲಸ, ಇವೆರಡೂ ನಮ್ಮಲ್ಲಿದ್ದರೆ ಎಂಥಹ ಮಹಾನ್ ಸಾಧನೆಯನ್ನಾದರೂ ಮಾಡಬಹುದು. ಇಂದಿನ ಮಕ್ಕಳು ವಿಜ್ಞಾನದ ಬಗ್ಗೆ ಹೆಚ್ಚಿನ ಕೌಶಲ್ಯವನ್ನು ಹೊಂದಬೇಕು. ಈ ನಿಟ್ಟಿನಲ್ಲಿ ಬಾಲಮಂದಿರ ಶಾಲೆಯಲ್ಲಿ ಏರ್ಪಡಿಸಿರುವ ಈ ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವವು ಅರ್ಥಪೂರ್ಣವಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರ‍್ರದ ಮೇಲ್ವಿಚಾರಕರಾದ ರೋಹನ ರಾಜೇಂದ್ರಜೀ ಬುಜಲೇ ಮಾತನಾಡಿ, “ಪ್ರೇರಣೆಯೇ ವಿದ್ಯಾರ್ಥಿಗಳಿಗೆ ಬಹುದೊಡ್ಡ ಶಕ್ತಿ. ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಶೇ.೨೫ರಷ್ಟಾದರೆ, ಉಳಿದ ಶೇ.೭೫ ಭಾಗವು ವಿದ್ಯಾರ್ಥಿಯ ಪಾತ್ರ, ಇನ್ನೊಬ್ಬರೊಂದಿಗೆ ಸಂವಹನ ಮಾಡುವುದು ಹಾಗೂ ನಿರಂತರ ಅಭ್ಯಾಸದಿಂದ ಕೂಡಿರುತ್ತದೆ”ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತಾಧಿಕಾರಿ ಜಿ.ಪಿ. ಕಾಮತ್ ಮಾತನಾಡಿ, “ಜ್ಞಾನ ಹಿಂದೆ, ವಿಜ್ಞಾನ ಮುಂದೆ ಇದೆ. ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಗುರಿಯಿದೆ ಅದನ್ನು ಹೊರತರುವ ಪ್ರಯತ್ನವೇ ಈ ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವದ ಮುಖ್ಯ ಉದ್ಧೇಶವಾಗಿದೆ”.ಎಂದು ನುಡಿದರು.

ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ “ಆಡಳಿತ ಮಂಡಳಿಯ ಸಹಕಾರದಿಂದ ಇಂಥಹ ದೊಡ್ಡ ವಿಜ್ಞಾನ ಮತ್ತು ಸಂಸ್ಕೃತಿ ಉತ್ವವ ನಡೆಸಲು ಸಾಧ್ಯವಾಯಿತು.“ ಎಂದರು.

ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ ಹಾಗೂ ಸುಮತಿದಾಮ್ಲೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಎನ್. ಬಂಟ್, ಬಾಲಮಂದಿರ ಪ್ರೌಢಶಾಲೆಯ ಶಿಕ್ಷಕಿ ಭಾರತಿ ಐಸಾಕ್ ಹಾಗೂ ನಜಿರುದ್ಧಿನ್ ಸೈಯದ್ ಉಪಸ್ಥಿತರಿದ್ದರು. ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಸ್.ಪಿ. ಕಾಮತ್ ಈ ಉತ್ಸವದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಶಿಕ್ಷಕಿ ಸೀಮಾ ರೇವಣಕರ ಕಾರ್ಯಕ್ರಮ ನಿರೂಪಿಸಿದರೆ, ನಾಹಿದಾ ಹನಗಿ ಸ್ವಾಗತ ಕೋರಿದರು ಹಾಗೂ ತೆರೇಸಾ ರೇಗೋ ವಂದನಾರ್ಪಣೆ ಸಲ್ಲಿಸಿದರು.ಈ ವಿಜ್ಞಾನ ಮತ್ತು ಸಂಸ್ಕೃತಿ ಉತ್ಸವದಲ್ಲಿ ಒಟ್ಟೂ ೧೦೭೪ ವಿದ್ಯಾರ್ಥಿಗಳು ಭಾಗವಹಿಸಿದ್ದು, ೧೯೫ ವಿಜ್ಞಾನದ ವಸ್ತುಪ್ರದರ್ಶನಗಳು, ೨೩೧ ಸಮಾಜ ಶಾಸ್ತç, ೧೧೧ ಗಣತದ ವಸ್ತುಪ್ರದರ್ಶನ ಹಾಗೂ ೧೮೭ ಚಿತ್ರಕಲೆ, ೨೦೦ ಕರಕುಶಲ ಮತ್ತು ೪೧ ರಂಗೋಲಿ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಕಾರವಾರದ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ಬೆಳಿಗ್ಗೆಯಿಂದ ಸಂಜೆಯ ತನಕ ವೀಕ್ಷಿಸಿ, ಪ್ರಯೋಜನ ಪಡೆದರು.

ಗಮನಿಸಿ