ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆಡಳಿತ ವಿಭಾಗದ ಕೊಠಡಿ ನವೀಕರಣಕ್ಕಾಗಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರು ತಮ್ಮ ಶಾಸಕ ನಿಧಿಯಿಂದ ಐದು ಲಕ್ಷ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

1.5 ಕೋಟಿ ವೆಚ್ಚದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ವಿವಿಧ ವಿಭಾಗವನ್ನ ನವೀಕರಣ ಮಾಡಲಾಗಿದ್ದು, ಇದನ್ನ ರಾಜ್ಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಅವರು ಇಂದು ನವೀಕರಣಗೊಂಡ ವಿವಿಧ ವಿಭಾಗವನ್ನ ಉದ್ಘಾಟಿಸಿದರು. ಇದೇ ವೇಳೆ ಹಾಜರಿದ್ದ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರು ಅಲ್ಲಿನ ಆಡಳಿತ ವಿಭಾಗದ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಡಳಿತ ಕಚೇರಿಯಲ್ಲೇ ಅತೀ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಯಾವುದೇ ಅಭಿವೃದ್ಧಿಯಾಗಿರಲಿಲ್ಲ.

ಇದನ್ನ ಗಮನಿಸಿದ ಶಾಸಕ ಸತೀಶ್ ಸೈಲ್‌ ಅವರು ಆಡಳಿತ ಕಚೇರಿಯ ನವೀಕರಣಕ್ಕಾಗಿ.ತಮ್ಮ ಶಾಸಕ ನಿಧಿಯಿಂದ ಐದು ಲಕ್ಷ ನೀಡುವುದಾಗಿ ಸ್ಥಳದಲ್ಲೇ ಘೋಷಣೆ ಮಾಡಿದ್ದಾರೆ.

ಇದನ್ನೂ ಗಮನಿಸಿ