ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಹನಿಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ವಿಚಾರ ಸದನದಲ್ಲಿ ಚರ್ಚೆ ಆದರು ಸರ್ಕಾರ ಗಂಭಿರವಾಗಿಲ್ಲ ಎಂಬ ಮಾತು ಬೇಡ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿಕೆ ನೀಡಿದ್ದಾರೆ.
ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದ ಕಾರವಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು ಸಂಬಂಧಪಟ್ಟವರು ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ದೂರು ಕೊಡುವುದರಲ್ಲಿ ವ್ಯತ್ಯಯ ಮಾಡಿದರೆ ನಾವು ತನಿಖೆ ಮಾಡುವುದು ಹೇಗೆ, ಸದನದಲ್ಲೂ ಹೇಳಿದ್ದೇನೆ ದೂರು ಬಂದರೆ ಉನ್ನತ ಮಟ್ಟದ ತನಿಖೆ ಆಗಲಿದೆ ಎಂದು ಈಗಲೂ ಆ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದ ಪರಮೇಶ್ವರ ರಾಜಣ್ಣ ನಿನ್ನೆ ನನ್ನ ಜೊತೆ ಚರ್ಚಿಸಿ ಮಾಹಿತಿ ಕೊಟ್ಟಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಕುರಿತು ಡಿಜಿ ಗೆ ಮಾಹಿತಿ ರವಾನಿಸಿದ್ದೇನೆ ರಾಜಣ್ಣ ಹೇಳಿರುವುದರ ಬಗ್ಗೆ ಡಿಜಿ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
ಇನ್ನೂ ಬಿಜೆಪಿಯಿಂದ ಯತ್ನಾಳ ಉಚ್ಛಾಟನೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಸಿದ ಸಚಿವ ಪರಮೇಶ್ವರ ಅವರು ಅದು ಬೇರೆ ಪಕ್ಷದವರ ವಿಚಾರ ನಾನು ಪ್ರತಿಕ್ರಿಯಿಸಲ್ಲ. ಅವರ ಪಕ್ಷದ ಬೆಳವಣಿಗೆ ಬಗ್ಗೆ ನಾನು ಹೇಳಿಕೆ ಕೊಡಲ್ಲ.ಯತ್ನಾಳ ಉಚ್ಚಾಟಣೆ ಮಾಡಿರುವ ಬಗ್ಗೆಯೂ ನಂಗೆ ಮಾಹಿತಿ ಇಲ್ಲ ಎಂದರು..ಈ ವೇಳೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಕಾರವಾರ ಶಾಸಕ ಸತೀಶ ಸೈಲ್, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಹಾಜರಿದ್ದರು.
ಇದನ್ನೂ ಓದಿ