ಬಾಗಲಕೋಟೆ: ಜನಸಂಖ್ಯೆ ಜಾಸ್ತಿಯಾಗಿದೆರೀ, ಮಧ್ಯದಂಗಡಿ ಕಡಿಮೆ ಇವೆ. ಕುಡಿಯೋರಿಗೆ ಮಧ್ಯ ಸರಳವಾಗಿ ಸಿಕ್ತಾಯಿಲ್ಲ. ಅವರ ಕಡೆನೂ ಗಮನ ಕೊಡ್ಬೇಕಲ್ಲ…
ಜನಸಂಖ್ಯೆ ಜಾಸ್ತಿಯಾಗಿದೆ. ಮಧ್ಯದ ಅಂಗಡಿಗಳ ಸಂಖ್ಯೆ ಕಡಿಮೆ ಇದೆ.ಮಧ್ಯ ಸೇವಿಸುವವರ ಬಗ್ಗೆಯೂ ಕಾಳಜಿ ಮಾಡಬೇಕಲ್ಲ. ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದ್ದಾರೆ.
ಬಾಗಲಕೋಟದಲ್ಲಿ ಮಾತನಾಡಿದ ಅವರು, ಹೊಸ ಅಂಗಡಿ ಆರಂಭಿಸಿದರೆ, ಹೆಚ್ಚು ಕುಡಿತಾರಾ ಎಂದು ಪ್ರಶ್ನಿಸಿದರು.ಆರೋಗ್ಯ ಸಚಿವ ದಿನೇಶ ಗುಂಡುರಾವ, ತಂಬಾಕು, ಸಿಗರೇಟ್ ಸೇರಿದಂತೆ ಮಾದಕ ಸೇವನೆಗೆ ಕಡಿವಾಣ ಹಾಕುತ್ತಿದ್ದರೆ,
ಮತ್ತೊಂದೆಡೆ ಅಬಕಾರಿ ಸಚಿವರಿಗೆ ಮಧ್ಯಪ್ರಿಯರ ಹಿತಾಸಕ್ತಿ ಮುಖ್ಯವಾಗಿದೆ.
ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು, ಹೆಚ್ಚುವರಿ ಮಧ್ಯದ ಅಂಗಡಿ ತೆರೆಯಲು ಮುಂದಾಗಿದೆ ಎಂದು ಆರೋಪಿಸಿವೆ.