ನವದೆಹಲಿ : ಉತ್ತರಾಖಂಡ ಸುರಂಗ(Uttarakhand Tunnel) ಕುಸಿತದಿಂದಾಗಿ ಸಿಲುಕಿರುವ 41ಕಾರ್ಮಿಕರಲ್ಲಿ ಈಗಾಗಲೇ 41 ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದ್ದು, 408 ಗಂಟೆಗಳ ಕಾರ್ಯಚರಣೆ ಸಕ್ಸೆಸ್ ಆಗಿದೆ.

ಕಳೆದ 17ದಿನಗಳ ಹಿಂದೆ ಸುರಂಗ ಕಾರ್ಯದಲ್ಲಿದ್ದಾಗ ಸುರಂಗ ಕುಸಿತ ಉಂಟಾಗಿ 41ಕಾರ್ಮಿಕರು ಸುರಂಗದ ಒಳಗೆ ಸಿಲುಕಿಕೊಂಡಿದ್ದರು. ಸುರಂಗದಲ್ಲಿ ಸಿಲುಕಿಕೊಂಡ ಕಾರ್ಮಿಕರ ರಕ್ಷಣೆಗಾಗಿ (Rescue of those trapped in the tunnel) NDRF ತಂಡ ನಿರಂತರವಾಗಿ ಕಾರ್ಯಚರಣೆ ನಡೆಸುತ್ತಿದ್ದು. ಇದೀಗ ಕೆಲ ಗಂಟೆಗಳ ಹಿಂದೆ ಹಂತ ಹಂತವಾಗಿ ಸುರಂಗದೊಳಗೆ ಸಿಲುಕಿಕೊಂಡ ಕಾರ್ಮಿಕರನ್ನ ಹೊರತರಲಾಗುತ್ತಿದ್ದು, ಸುರಂಗದೊಳಗೆ ಸಿಲುಕಿಕೊಂಡ ಎಲ್ಲಾ 41 ಕಾರ್ಮಿಕರನ್ನ ಪೈಪ್ ಲೈನ್ ಮೂಲಕ ಹೊರ ತರಲಾಗಿದೆ. ಈ ಸುರಂಗ ನಾಲ್ಕುವರೆ ಕಿಲೋಮೀಟರ್ ಹೊಂದಿದೆ.
ಸುರಂಗದಿಂದ ಹೊರ ತರಲಾದ ಪ್ರತಿಯೊಬ್ಬ ಕಾರ್ಮಿಕರಿಗೂ ಕೂಡೂ ಸ್ಥಳದಲ್ಲೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಅವರನ್ನ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಒಬ್ಬರನ್ನೊಬ್ಬನ್ನೇ ಸುರಂಗದಿಂದ ಹೊರ ತರಲಾಗುತ್ತಿದೆ. ಕಾಮಗಾರಿ ನಡೆಸುತ್ತಿದ್ದ ವೇಳೆ 12ರಂದು 41ಕಾರ್ಮಿಕರು ಸುರುಂಗದೊಳಗೆ ಸಿಲುಕಿಕೊಂಡಿದ್ದರು. ಸುರಂಗದಲ್ಲಿ ಸಿಲುಕಿಕೊಂಡವರು ಸುರಕ್ಷಿತವಾಗ ಹೊರಗೆ ಬರಲೆಂದು ಸಾಕಷ್ಟು ಪ್ರಾರ್ಥನೆ ಮಾಡಲಾಗಿದ್ದು, ಇದೀಗ ಅದು ಯಶಸ್ವಿಯಾಗಿದೆ.