suddibindu.in
karwar: ಕಾರವಾರ: ಪೆಟ್ರೋಲ್ ಹಾಕಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಉತ್ತರಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ರೈಲ್ವೆ ಸ್ಟೇಶನ್ ಸಮೀಪದಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಮಹಿಳೆಯ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.ಮೃತ ಮಹಿಳೆಗೆ ಸುಮಾದು 30ರಿಂದ 35ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಪತ್ತೆಯಾಗಿರುವ ಮಹಿಳೆ ಶವ ಸುಟ್ಟು ಕರಕಲಾಗಿದೆ. ತಲೆ ಹಾಗೂ ಬೆನ್ನಿನ ಭಾಗದಲ್ಲಿ ಹೆಚ್ಚು ಸುಟ್ಟಿದೆ.ಪ್ಯಾಂಟ್ ಧರಿಸಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪತ್ತೆಯಾಗಿರುವ ಮಹಿಳೆಯ ಸೊಂಟದ ಮೇಲ್ಬಾಗದಲ್ಲಿ ಯಾವುದೇ ಬಟ್ಟೆ ಇಲ್ಲವಾಗಿದೆ. ಆಕೆಯನ್ನ ಯಾರೋ ಕೊಲೆ ಮಾಡಿ ಬೆಂಕಿ ಹಚ್ಚಿ ಹೋಗಿರುವ ಸ್ಥಿತಿಯಲ್ಲಿದೆ.
ಘಟನಾ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಡಾಗ್ ಸ್ಕಾಡ್ ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ