ಸುದ್ದಿಬಿದ್ದು ನ್ಯೂಸ್ ಡೆಸ್ಕ್
ಕಾರವಾರ : ಗೋವಾದಿಂದ ಬೋಟ್ ಮೂಲಕ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಕರಾವಳಿ ಕಾವಲು ಪಡೆ ಪೊಲೀಸರು ಕಾರ್ಯಚರಣೆ ನಡೆಸಿ ಲಕ್ಷಾಂತರ ಮದ್ಯ ಹಾಗೂ ಸ್ವತ್ತನ್ನ ಮಾಜಾಳಿ ಸಮುದ್ರ ತೀರದಲ್ಲಿ ವಶಕ್ಕೆ ಪಡೆಯಲಾಗಿದೆ.

ಗೋವಾದಿಂದ ಸಮುದ್ರದ‌ ಮೂಲಕ ಬೋಟ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದಾಗ ಕರಾವಳಿ ಕಾವಲುಪಡೆ ಇನ್ಸ್‌ಪೆಕ್ಟರ್ ನಿಶ್ಚಲ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಕ್ರಮ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ‌ ಪಡೆಯಲಾಗಿದೆ.

ಗೋವಾ ಫೆನ್ನಿ, ವಿಸ್ಕಿ, ಉರಾಕ್ ಸೇರಿ ಗೋವಾ ಮದ್ಯ ಅಕ್ರಮ ಸಾಗಾಟಕ್ಕೆ ಯತ್ನಸಿದ್ದು,1.50 ಲಕ್ಷ ಮೌಲ್ಯದ ಗೋವಾ ಮದ್ಯ, 1.40 ಲಕ್ಷ ಮೌಲ್ಯದ ಬೋಟ್ ಹಾಗೂ ಎಂಜಿನ್ ವಶಕ್ಕೆ ಪಡೆದಿದ್ದಾರೆ. ಕಾವಲುಪಡೆ ಪೊಲೀಸ್ ಕಂಡು ಬೋಟ್ ನಲ್ಲಿ ಇದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.