ಸುದ್ದಿಬಿಂದು ನ್ಯೂಸ್ ಡೆಸ್ಕ್
ಭಟ್ಕಳ : ದಾಖಲೆ ಇಲ್ಲದೇ ಇಕೋವಾಹನದಲ್ಲಿ ಸಾಗಿಸುತ್ತಿದ್ದ ಮೂವರನ್ನ ವಶಕ್ಕೆ ಪಡೆದು ಲಕ್ಷಾಂತರ ರೂಪಾಯಿ ವಶಕ್ಕೆ ಪಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ನಡೆದಿದೆ.

ಭಟ್ಕಳ ಮೂಲದ ಯಶ್ವಂತ್ ಗೊಂಡ, ಹೊನ್ನಾವರದ ಗುಣವಂತೆಯ ಶ್ರೀನಿವಾಸ್ ಗೌಡ, ರಘು ನಾಯ್ಕ ಅವರನ್ನ ವಶಕ್ಕೆ ಪಡೆಯಲಾಗಿದೆ.ಬಉಡುಪಿಯಿಂದ ಭಟ್ಕಳಕ್ಕೆ ಅಗಮಿಸುತ್ತಿದ್ದ ಇಕೋ ಕಾರ್‌ನಲ್ಲಿ ಹಣ ಪತ್ತೆಯಾಗಿದೆ‌.

ದಾಖಲೆ ರಹಿತವಾಗಿ ತರುತ್ತಿದ್ದ 14,90,125 ಲಕ್ಷ ರೂಪಾಯಿ ಪತ್ತೆಯಾಗಿದೆ. ಈ ಹಣವನ್ನಬಮುರ್ಡೇಶ್ವರಕ್ಕೆ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ‌.

ಈ ಹಣ ಶ್ರೀಕ್ಷೇತ್ರ ಧರ್ಮಸ್ಥಳ ಗ್ತಾಮಾಭಿವೃದ್ಧಿ ಯೋಜನೆಯ ಹಣ ಎಂದು ಹೇಳಲಾಗಿದೆ.ಬ್ಯಾಂಕ್ ಗೆ ಸಾಗಿಸಲು ಸಿಬ್ಬಂದಿಗಳು ಹಣ ತಂದಿದ್ದರು ಎನ್ನಲಾಗಿದೆ. ಹಣದ ಬಗ್ಗೆ ಪೊಲೀಸರಿಗೆ ದಾಖಲೆ ಒದಗಿಸಿದ್ದಾರೆ‌ ಎನ್ನಲಾಗಿದೆ‌.