ಸುದ್ದಿಬಿಂದು ನ್ಯೂಸ್ ಡೆಸ್ಕ್

ಹಳಿಯಾಳ ; ನಮ್ಮ‌ ಕಾಂಗ್ರೆಸ್ ನಲ್ಲಿ ನಾಮಧಾರಿ‌ ನಾಮಧಾರಿ‌ ಸಮಾಜಕ್ಕೆ ಟಿಕೆಟ್ ನೀಡುವಲ್ಲಿ ನನ್ನ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಪ್ರಣವಾನಂದ ಸ್ವಾಮೀಜಿ ಆಕ್ರೋಶ ಎನ್ನುವ ಅಡಿ ಬರಹದಲ್ಲಿ ಸುದ್ದಿಗಳು ಪ್ರಕಟವಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾನು ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲ್ಲೂ ಪ್ರತಿಯೊಂದು ಸಮುದಾಯವನ್ನ ಸಮಾನವಾಗಿ ನೋಡಿಕೊಂಡು ಬಂದಿದ್ದೇನೆ.ಜಾತಿ ವಿಚಾರದಲ್ಲಿ ಯಾವತ್ತು ಮನ್ನಡೆ ಹಾಕಿಲ್ಲ‌.ನನ್ನ ಜಿಲ್ಲೆಯ ಪ್ರತಿಯೊಂದು ಸಮಾಜದ ಜನ ಮುಂದೆ ಬಂದರೆ ವೈಯಕ್ತಿಕವಾಗಿ ನನ್ನಗೆ ತುಂಬಾ ಸಂತೋಷ ಪಡುವವರಲ್ಲಿ ನಾನು ಸಹ ಒಬ್ಬ..
ನಾಮಧಾರಿ‌ ಸಮುದಾಯ ಮೊದಲಿನಿಂದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನ್ನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಬಹುಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ನನ್ನ ಒತ್ತಾಯ ಸಹ ಇದೆ.

ನಾನು ನಾಮಧಾರಿ‌ ಸಮಾಜದ ಅಭ್ಯರ್ಥಿಯನ್ನ ಕಡೆಗಣಿಸುತ್ತಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾಗಿರುವ ವಿಚಾರ. ಇಂತಹ ಸುಳ್ಳು ಸುದ್ದಿಯನ್ನ ಹಬ್ಬಿಸಿ ನಮ್ಮ ನಡುವೆ ದ್ವೇಷದ ಕಿಡಿಯನ್ನ ಹಚ್ಚಲಾಗುತ್ತಿದೆ. ಈ ವಿಷಯಲ್ಲಿ ಪರಮಪೂಜ್ಯರಾದ ಪ್ರಣವನಾಂದ ಸ್ವಾಮೀಜಿ ಅವರಿಗೆ ತಪ್ಪು ಗ್ರಹಿಕೆ ಆಗಿರಬಹುದು ಇಂತಹ ಸತ್ಯಕ್ಕೆ ದೂರವಾದ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಆರ್ ವಿ ದೇಶಪಾಂಡೆ ಅವರು ಸ್ವಾಮೀಜಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.