ಸುದ್ದಿಬಿಂದು ನ್ಯೂಸ್ ಡೆಸ್ಕ್
ಕುಮಟಾ :
ಬಸ್ ನಲ್ಲಿ ಪ್ರಯಾಣಿಸಲು‌ ಕುಳಿತಿದ್ದ ಪ್ರಯಾಣಿಕ‌ನೋರ್ವ‌‌ ಪ್ಲಾಟ್ ಮೇಲೆ ಉಗುಳಿದ್ದ ಪ್ರಯಾಣಿಕನಿಗೆ ಕೆಳಗಿಳಿಸಿ ಆತನ ಕೈಯಿಂದಲ್ಲೆ ಸ್ವಚ್ಚತೆ ಮಾಡಿಸಿರುವ ಪ್ರಸಂಗ ಇಲ್ಲಿ‌ನ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕುಮಟಾ ಬಸ್ ನಿಲ್ದಾಣದಿಂದ ಊರಿಗೆ ಹೋಗಲು ಬಸ್ ಹತ್ತಿಕೊಂಡ ಪ್ರಯಾಣಿಕನೋರ್ವ ಬಾಯಿ ತುಂಬಾ ಪಾನ್ ಮಸಾಲಾ ತುಂಬಿಕೊಂಡಿದ್ದ, ಬಸ್ ಏರಿದ ಬಳಿಕ ಕುಳಿತ ಜಾಗದಿಂದಲ್ಲೆ ಬಾಯಲ್ಲಿ ತುಂಬಿಕೊಂಡಿದ್ದ ಪಾನ್ ಮಸಾಲವನ್ನ ಅಲ್ಲಿಂದಲೇ ಉಗುಳಿದ್ದಾನೆ.

ಇದನ್ನ ಗಮನಿಸಿದ ಕಂಡಕ್ಟರ್ ಹಾಗೂ ಬಸ್ ನಿಲ್ದಾಣದಲ್ಲಿ ಇದ್ದ ಕೆಎಸ್ ಆರ್ಟಿಸಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಗುಳಿದ ಪ್ರಯಾಣಿಕನಿಗೆ ತರಾಟೆಗೆ ತೆಗೆದುಕೊಂಡು ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಒಳಗಡೆ ಉಗುಳಿದ್ದನ್ನ ಆತನ ಕೈಯಿಂದ ಸ್ವಲ್ಪ ಪಡಿಸಿದ್ದಾರೆ‌.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು, ಕಸಗಳನ್ನ ಎಸೆಯಬಾರದು ಎಂದು ಸೂಚನಾ ಫಲಕವನ್ನ ಅಳವಡಿಸಿದ್ದರು. ಅದೆಷ್ಟೋ ಪ್ರಯಾಣಿಕರು, ಸಾರ್ವಜನಿಕರು ತಮ್ಮಗೆ ಆ ನಾಮಫಲಕ್ಕೆ ಯಾವುದೆ ಸಂಭಂಧವೆ ಇಲ್ಲ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.ಇನ್ನೂ ಮುಂದೆ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವ ಮೊದಲು ಹತ್ತಿಬಾರಿ ವಿಚಾರಿಸಿ ಇಲ್ಲವಾದರೆ ಇದೆ ಪ್ರಯಾಣಿಕನಿಗೆ ಆದ ಪರಿಸ್ಥಿತಿ ನಿಮ್ಮಗೂ ಬರಬಹುದು ಎಚ್ಚರದಿಂದ ಉಳಿಯಬೇಕಿದೆ.