suddibindu.in
ಕುಮಟಾ : ತಾಲೂಕಿನ ಬರ್ಗಿಯಲ್ಲಿ ಕಳೆದ ಅನೇಕ ‌ದಿನಗಳಿಂದ ಜಾನುವಾರುಗಳ ಕಳ್ಳತನ ಜೋರಾಗಿದ್ದು,ರೈತರ ಕೊಟ್ಟಿಗೆಗಳು ಖಾಲಿಯಾಗುವ ಹಂತ ತಲುಪಿದೆ. ಕೊಟ್ಟಿಗೆಯಿಂದ ಮೇಯಲು ಹೋದ ಜಾನುವಾರುಗಳು ಗೋ ಕಳ್ಳರ ಪಾಲಾಗುತ್ತಿದೆ.

ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ನಿರಂತರವಾಗಿ ಜಾನುವಾರು ಕಳ್ಳತ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲೂ ಬರ್ಗಿ ಗ್ರಾಮ ಒಂದರಲ್ಲೆ ಸರಿ ಸುಮಾರು ನೂರಾರು ಜಾನುವಾರುಗಳು ಗೋ ಕಳ್ಳರ ಪಾಲಾಗಿದೆ. ಕೊಟ್ಟಿಗೆಯಿಂದ ಹೋದ ಜಾನುವಾರು ಒಂದು ದಿನ ಅಪ್ಪಿ ತಪ್ಪಿ ಬಾರದೆ ಹೋದರೆ ಆ ಜಾನುವಾರುಗಳನ್ನ ಕಳ್ಳರು ಹೊತ್ತೊಯ್ಯುತ್ತಿದ್ದಾರೆ. ಬಹುತೇಕವಾಗಿ ಹೆದ್ದಾರಿ ಅಕ್ಕ-ಪಕ್ಕದಲ್ಲಿ ರಾತ್ರಿ ವೇಳೆ ಮಲಗುವ ಜಾನುವಾರನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ.

ಹಗಲು ಪೂರ್ತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ಮಾಡದೆ ಇರುವುದು ಗೋವು ಕಳ್ಳತನ ಹೆಚ್ಚಾಗಲು ಪ್ರಮುಖ ಕಾರಣ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.ಇನ್ನೊಂದೆಡೆ ಹೆದ್ದಾರಿಯಲ್ಲಿ ಸಾಕಷ್ಟು ಚೆಕ್ ಪೊಸ್ಟ್‌ಗಳು ಇದ್ದರೂ ಕೂಡ ಅಕ್ರಮವಾಗಿ ಜಾನುವಾರು ತುಂಬಿದ ವಾಹನಗಳು ಹೇಗೆ ಆ ಚೆಕ್ ಪೊಸ್ಟ್‌ಗಳನ್ನ ದಾಟಿ ಹೋಗುತ್ತಿವೆ. ಎನ್ನುವ ಪ್ರಶ್ನೆ ಎದುರಾಗಿದೆ. ಅಕ್ರಮ ದಂದೆ ನಡೆಯುವುದನ್ನ ತಪಾಸಣೆ‌ ಮಾಡಲಾಗದಿದ್ದರೆ ಚೆಕ್ ಪೊಸ್ಟ್‌ಗಳಾದರೂ ಯಾಕಾಗಿ ಬೇಕಾಗಿದೆ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದಾರೆ. ಅಥವಾ ಈ ಅಕ್ರಮ ಜಾನುವಾರರು ಸಾಗಾಟಗಾರರಿಗೆ ಯಾರ ಅಭಯ ಇದೆ ಎನ್ನುವುದು ಅರ್ಥವಾಗದಂತಾಗಿದೆ.

ಸ್ಥಳೀಯರ ಕೈವಾಡ ಶಂಕೆ.
ಪ್ರತಿನಿತ್ಯ ರಸ್ತೆ ಬದಿಯಲ್ಲಿ ಜಾನುವಾರು ಇರುವ ಬಗ್ಗೆ ಸ್ಥಳೀಯರೇ ಈ ಗೋ ಕಳ್ಳರಿಗೆ ಮಾಹಿತಿ ನೀಡುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಯಾವ ಸಮಯದಲ್ಲಿ ಬಂದರೆ ಅಲ್ಲಿ ಜಾನುವಾರುಗಳು ಸಿಗುತ್ತದೆ. ಸುತ್ತಮುತ್ತ ಜನ ಓಡಾಟ ಇದೇಯಾ. ಎಲ್ಲದರ ಬಗ್ಗೆ ಪ್ರತಿ ಭಾಗದಲ್ಲಿಯೂ ಗೋ ಕಳ್ಳರಿಗೆ ಮಾಹಿತಿದಾರರು ಇದ್ದಾರೆ ಎನ್ನಲಾಗುತ್ತಿದೆ‌.ಜಿಲ್ಲೆಯಲ್ಲಿ ವ್ಯಾಪಕವಾಗಿ ಜಾನುವಾರು ಕಳ್ಳತನವಾಗುತ್ತಿರುವ ಬಗ್ಗೆ ಜಿಲ್ಲೆಯ ಹಿರಿಯ ಪೊಲೀಸ ಅಧಿಕಾರಿಗಳು ಗೋ-ಕಳ್ಳರ ಬಂಧನಕ್ಕಾಗಿ ರಾತ್ರಿ ವೇಳೆ ವಿಶೇಷ ಪೊಲೀಸ್ ಟೀಂ ರಚನೆ ಮಾಡಬೇಕಾಗಿದೆ‌. ಇಲ್ಲದೆ ಹೋದರೆ ಜಾನುವಾರುಗಳೆ ಕಣ್ಣಿಗೆ ಕಾಣದಂತಹ ಪರಿಸ್ಥಿತಿ ಉಂಟಾಗಲಿದೆ‌.