ಹಳಿಯಾಳ ;  ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಭ್ರಷ್ಟಾಚಾರ ವಿಚಾರದಲ್ಲಿ ಶಾಸಕನ ಪತ್ತೆಗಾಗಿ ಲುಕ್‌ ಔಟ್ ನೋಟಿಸ್ ನೀಡಿದ್ದಾಗಿ ಬಿಜೆಪಿ ಸರ್ಕಾರ ಹೇಳಿದೆ‌. ಆದರೆ ಲುಕ್‌ ಔಟ್ ನೋಟಿಸ್ ನೀಡಿದ್ದೇ ಬೊಮ್ಮಾಯಿ ಸರ್ಕಾರದ ಒಂದು ವಂಚನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಹೇಳಿಕೆ ನೀಡಿದ್ದಾರೆ.

ಅವರು ಹಳಿಯಾಳಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರೀಯಿಸಿದ ಸುರ್ಜೆವಾಲ್  ಮಾಡಾಳ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದು ನಾಲ್ಕು ದಿನಗಳಾಗಿದೆ. ಇದುವರೆಗೂ ಸಹ ತಮ್ಮದೇ ಪಕ್ಷದ ಶಾಸಕನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇನ್ನು ಬೊಮ್ಮಾಯಿ ಸರ್ಕಾರ ಗೂಂಡಾಗಳನ್ನ ಹೇಗೆ ಹಿಡಿಯುತ್ತಾರೆ

ಇದರಿಂದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಇದರಲ್ಲಿ ಶಾಮಿಲಾಗಿರುವುದು ಕಂಡುಬರುತ್ತಿದೆ. ಅವರೇ ಬಿಜೆಪಿ ಶಾಸಕ ನಾಪತ್ತೆಯಾಗುವಲ್ಲಿ ಸಹಕರಿಸಿದ್ದಾರೆ. ಇದು ಕೇವಲ ಬಿಜೆಪಿ ಶಾಸಕ, ಅವನ ಪುತ್ರನ ಭ್ರಷ್ಟಾಚಾರವಲ್ಲ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಮಾಡಾಳ ಬಂಧನವಾದರೆ ಇವರೆಲ್ಲರ ಹೆಸರು ಬಯಲಿಗೆ ಬರುವ ಆತಂಕ ಬಿಜೆಪಿಯವರಿಗೆ ಎದುರಾಗಿದೆ.‌ಮೋದಿ, ಅಮಿತ್ ಷಾ, ಬೊಮ್ಮಾಯಿಯವರು ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಈಗ ಭ್ರಷ್ಟಾಚಾರದ ಸಾಕ್ಷ್ಯ ನಿಮ್ಮ ಕಣ್ಣಮುಂದೇ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವಾಗ ರಾಜೀನಾಮೆ ಕೊಡುತ್ತೀರಿ? ಈ ಎಲ್ಲ ಬೆಳವಣಿಗೆಗಳ ಕುರಿತು ವಿರೋಧ ವ್ಯಕ್ತಪಡಿಸಲು ಮಾರ್ಚ್ 9 ರಂದು ಕರ್ನಾಟಕ ಬಂದ್ ಕರೆಕೊಡಲಾಗಿದೆ. ಸಾಂಕೇತಿಕವಾಗಿ ಬಂದ್ ಮಾಡುತ್ತಿದ್ದು ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗಲ್ಲ. ಕೇವಲ 2 ಗಂಟೆಗಳ ಕಾಲ ಮಾರುಕಟ್ಟೆ ಬಂದ್ ಮಾಡುತ್ತೇವೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಜನರ ಮುಂದೆ ತರುತ್ತೇವೆ ಎಂದು  ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆ