ಕುಮಟ : ರಾಜ್ಯವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ತಿಂಗಳಷ್ಟೆ ಭಾಕಿ ಇದ್ದು,ಚುನಾವಣಾ ಕಣ ರಂಗೇರತ್ತಾ ಇದೆ. ಈ ನಡುವೆ ಹೈ ವೋಲ್ಟೇಜ್ ಕ್ಷೇತ್ರವೆಂದೆ ಬಿಂಬಿತವಾಗಿರುವ ಕುಮಟ ವಿಧಾಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೇಟ್ ಗಾಗಿ ತೀವ್ರತರವಾದ ಪೋಟಿ ಇದೆ,ಇಡುವೆ ಇದೀಗ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತಾ ಆಳ್ವಾ ಕೂಡ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಸ್ಪರ್ಧೆ ಮಾಡೋ ಬಗ್ಗೆ ಸರ್ವೆಕೂಡ ನಡೆಸಲಾಗತ್ತಾ ಇದ್ದು, ಹೈಕಮಾಂಡ ಸ್ಪರ್ಧೆ ಇಳಿಸಲು ಸೂಚನೆ ನೀಡಿದ್ದರೆ ಕಣಕಿಳಿಯಲು ನಾನು ಸಿದ್ದ ಮೊದಲ ಬಾರಿಗೆ ಆಳ್ವಾ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡತ್ತೀನಿ ಅಂತಾ ಅವರು ಸ್ಪಷ್ಟವಾಗಿ ಹೇಳಿಲ್ಲ.

ಕುಮಟ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ ಹದಿನೈದು ಮಂದಿ ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ  ಹದಿನಾಲ್ಕು ಆಕಾಂಕ್ಷಿಗಳು ಒಟ್ಟಾಗಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅರಿಗೆ ಈ ಭಾರಿ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಪಕ್ಷದ ಹೈಕಮಾಂಡ ಎದುರು ಹೇಳಿಕೊಂಡಿದ್ದಾರೆ.

ಆದರೆ ಈ ನಡುವೆ ಕ್ಷೇತ್ರದಲ್ಲಿರುವ ಎಲ್ಲಾ ಆಕಾಂಕ್ಷಿಗಳನ್ನ ಬಿಟ್ಟು , ಹದಿನಾರನೇ ಆಕಾಂಕ್ಷಿ ಆಗಿರುವ ನಿವೇದಿತಾ ಆಳ್ವಾ ಏಂಟ್ರಿಕೊಟ್ಟಿರೋದು ಎಲ್ಲಾ ಹದಿನೈದ್ದು ಆಕಾಂಕ್ಷಿಗಳಿಗೂ ಈಗ ತಲೆನೋವಾಗಿ ಪರಿಣಮಿಸಿದೆ.

ಸದ್ಯ ಕುಮಟ ಕ್ಷೇತ್ರದಲ್ಲಿ ಈ ಭಾರಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಬಿ ಕೆ ಹರಿಪ್ರಸಾದ ಅವರ ಆಪ್ತ ಮಂಜುನಾಥ ಎಲ್ ನಾಯ್ಕ, ಶಿವಾನಂದ ಹೆಗಡೆ ಕಡತೋಕಾ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಎಲ್ಲರನ್ನ ಬಿಟ್ಟು ನಿವೇದಿತಾ ಆಳ್ವಾ ಅವರನ್ನೆ ಕುಮಟ ಕ್ಷೇತ್ರದಿಂದ ಕಣಕ್ಕೆ ಇಳಿಸಿದ್ದರೆ, ಕಾಂಗ್ರೆಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಭಿನ್ನಮತ ಸ್ಪೋಟಗೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಯಾರೇ ಅಭ್ಯರ್ಥಿಯಾರಾದ್ರೂ ಒಟ್ಟಾಗಿ ಕೆಲಸ ಮಾಡಿ ಎಂದಿದ್ದ ಡಿ ಕೆ

ಈ ಹಿಂದೆ ಕಮಟಕ್ಕೆ ಸಮಾವೇಶಕ್ಕೆ ಆಗಮಿಸಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಒಂದು ಮಾತು ಹೇಳಿದ್ದರು. ಈ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಆದರೆ ಅರ್ಜಿ ಹಾಕಿದವರೆಗೆ ಪಕ್ಷ ಭಿ ಫಾರ್ಮಂ ನೀಡೆ ಬಿಡುತ್ತವೆ ಎಂದು ಹೇಳೋದಕ್ಕೆ ಆಗಲ್ಲ. ಯಾರಿಗೆ ಟಿಕೇಟ್ ಕೊಟ್ಟರು ಪ್ರತಿಯೊಬ್ಬರು ಪಕ್ಷದ ಅಭ್ಯರ್ಥಿಗೆಲುವಿಗಾಗಿ ಶ್ರಮಿಸಬೇಕು ಎಂದು ಹೇಳಿದ್ದರು. ಅಂದು ಡಿಕೆ ಶಿವಕುಮಾರ ಹೇಳಿರುವ ಮಾತು ಇದೀಗ ಚರ್ಚೆ ಆಗುತ್ತಿದ್ದು, ಕುಮಟ ಕ್ಷೇತ್ರದಲ್ಲಿ ಅರ್ಜಿ ಅಲ್ಲಿಸಿದ ಎಲ್ಲರನ್ನ ಬಿಟ್ಟು ಹೊಸಬರಿಗೆ ಈ ಭಾರಿ ಟಿಕೇಟ್ ನೀಡವ ಬಗ್ಗೆ ಮೊದಲೆ ಹೈಕಮಾಂಡ ತೀರ್ಮಾನ ತೆಗೆದುಕೊಂಡಿದ್ಯಾ ಎನ್ನುವ ಬಗ್ಗೆ ಪಕ್ಷದೊಳಗೆ ಸದ್ಯ ಚರ್ಚೆಯ ವಿಷಯವಾಗಿದೆ.