ಸುದ್ದಿಬಿಂದು ಬ್ಯೂರೋ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಸಚಿವ ಮಾಂಕಾಳು ವೈದ್ಯರ ಆದೇಶದಂತೆ ಮೂರು ವರ್ಷ ದಾಟಿದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಚಾಲನೆಗೊಂಡಿದೆ.

ಇದರಂತೆ ಬನವಾಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಹಾಲಿ ಬ್ಲಾಕ್ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ಕೂಗು ಜೋರಾಗಿದ್ದು, ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗಿದೆ. ಸುನಿಲ್ ನಾಯ್ಕ್ ಮಳಲಗಾಂವ್,ಈರಪ್ಪ ನಾಯ್ಕ್ ಬೀಳೂರು, ಸುದರ್ಶನ್ ನಾಯ್ಕ್ ಅಂಡಿಗೆ,‌ಬಸವರಾಜ್ ದೊಡ್ಮನಿ,ಬಸವರಾಜ್ ನಂದಿಕೆಶ್ವರ ಮಠ,ಸಿದ್ದನಗೌಡ ಬೆಣಗಿ,ರವಿ ನಾಯ್ಕ್ ಕಲಕರಡಿ, ಹೀಗೆ ಹಲವು ಆಕಾಂಕ್ಷಿಗಳಿದ್ದಾರೆ‌.

ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಕ್ರಿಯಾಶೀಲ ಯುವಕರಾದ ಅಂಡಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ್ ನಾಯ್ಕ್ ಅವರನ್ನ ಬ್ಲಾಕ್ ಅಧ್ಯಕ್ಷರಾಗಿ ಮಾಡಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ.