ಸುದ್ದಿಬಿಂದು ಬ್ಯೂರೋ
ಕಾರವಾರ
: ರಾಜಕೀಯವಾಗಿ‌ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್‌ಸೈಲ್‌ ಹಾಗೂ ಆನಂದ‌ ಅಸ್ನೋಟಿಕರ್ ‌ಇದೀಗ ಇಬ್ಬರೂ ಒಂದಾಗಿದ್ದು, ಸೈಲ್ ಪರ್ ಆನಂದ‌ ಪ್ರಚಾರಕ್ಕೆ‌ ಇಳಿದಿದ್ದಾರೆ.

ಈ‌ ಹಿಂದಿನಿಂದಲ್ಲೂ ಸತೀಶ್ ಸೈಲ್ ಹಾಗೂ ಆನಂದ ಅಸ್ನೋಟಿಕರ್ ರಾಜಕೀಯವಾಗಿ ಬದ್ದ ವೈರಿಗಳಾಗಿದ್ದರು. ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸೇರಿದಂತೆ ಈ ಮೊದಲಿನಿಂದಲ್ಲೂ ಈ ಇಬ್ಬರೂ ನಾಯಕರು ರಾಜಕೀಯವಾಗಿ ಬದ್ದ ವೈರಿಗಳಾಗಿದ್ದರು. ಆದರೆ ಈ ಬಾರಿ‌ ಸತೀಶ ಸೈಲ್‌ ಕಾಂಗ್ರೆಸ್ ನಿಂದ ಸ್ಪರ್ಧೆ ಗೆ ಇಳಿದಿದ್ದರೆ. ಆನಂದ ಜೆಡಿಎಸ್, ಬಿಜೆಪಿ, ಹಾಗೂ ಕಾಂಗ್ರೆಸ್ ನಿಂದಲ್ಲೂ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದರು. ಆದರೆ‌ ಜೆಡಿಎಸ್ ನಲ್ಲಿ ಅವಕಾಶ ಇದ್ದರೂ ಸಹ ಆನಂದ ಅಸ್ನೋಟಿಕರ್ ಸ್ಪರ್ಧೆಗೆ ಮುಂದಾಗದೆ  ಕೊನೆ ಕ್ಷಣದವರೆಗೂ ಬಿಜೆಪಿ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದರು.ಅಲ್ಲಿಯೂ ಟಿಕೆಟ್ ‌ಸಿಗದೆ ಇದ್ದಾಗ ಪಕ್ಷೇತರವಾಗಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ  ಚರ್ಚೆ ಸಹ ನಡೆದಿತ್ತು.

ಆದರೆ ಈಗೀಗ ಯಾವ ಪಕ್ಷದಿಂದಲ್ಲೂ ಸ್ಪರ್ಧೆ ‌ಮಾಡದೆ ದೂರ ಉಳಿದುಕೊಂಡಿದ್ದ ಆನಂದ ಅಸ್ನೋಟಿಕರ್ ಕೆಲ ದಿನಗಳ‌ ಹಿಂದೆ ತನ್ನ ಎಲ್ಲಾ ಬೆಂಬಲಿಗರಿಗೆ ಸೈಲ್ ಪರ ಪ್ರಚಾರ ಮಾಡುವಂತೆ ಸೂಚನೆ ಕೂಡ ನೀಡಿದ್ದರು. ಆನಂದ ಸೂಚನೆಯಂತೆ ಬಹುತೇಕ ಎಲ್ಲರೂ ಸೈಲ್ ಪರ ಪ್ರಚಾರಕ್ಕೆ ಇಳಿದಿದ್ದರು. ಇದಾಗ ಬೆನ್ನಲೆ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಆನಂದ ಅಸ್ನೋಟಿಕರ್ ಇಂದಿನಿಂದ ಬಹಿರಂಗವಾಗಿಯೆ ಇದೀಗ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.

ಅಸ್ನೋಟಿಕರ್ ಇಂದು ಕಾರವಾರ ವಿಧಾನಸಭಾ ಕ್ಷೇತ್ರದ ಅಂಕೋಲಾ ತಾಲೂಕಿನ ಹಾರಡವಾಡ ಸೇರಿದಂತೆ ಅನೇಕ‌ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಸತೀಶ ಸೈಲ್ ಪರ‌ಪ್ರಚಾರ ನಡೆಸುತ್ತಿದ್ದು, ಕ್ಷೇತ್ರದ ಮತದಾರ ಅಚ್ಚರಿಗೆ ಕಾರಣವಾಗಿದೆ.