ಸುದ್ದಿಬಿಂದು ಬ್ಯೂರೋ
ಹೊನ್ನಾವರ
: ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಡಿ ಕೆ ಶಿ ಬಂದಿಳಿದ ಹ್ಯಾಲಿಪ್ಯಾಡ್ ಸಮೀಪ ಬೆಂಕಿ ಹೊತ್ತಿಕೊಂಡ ಘಟನೆ ರಾಮತೀರ್ಥ ಹ್ಯಾಲಿಪ್ಯಾಡ್ ಬಳಿ ನಡೆದಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಇಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದ ಅಭ್ಯರ್ಥಿ ನಿವೇದಿತ್ ಆಳ್ವ ಅವರ ಪರ ಪ್ರಚಾರಕ್ಕಾಗಿ ಮೈಸೂರಿನಿಂದ ಹ್ಯಾಲಿಕಾಪ್ಟರ್ ಮೂಲಕ ಹೊನ್ನಾವರಕ್ಕೆ ಆಗಮಿಸಿದ್ದರು. ಇಲ್ಲಿನ ರಾಮತೀರ್ಥ ಬಳಿ ಹ್ಯಾಲಿಪ್ಯಾಡ್ ನಲ್ಲಿ ಡಿ ಕೆ ಶಿವಕುಮಾರ ಅವರು ಬಂದು ಇಳಿದ ಕ್ಷಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಹ್ಯಾಲಿಪ್ಯಾಡ್ ಗಡ ಸಿಗ್ನಲ್ ಕೊಡಲು ಸ್ಕೋಕ್ ಕ್ಯಾಂಡಲ್ ನಿಂದ ಹ್ಯಾಲಿಪ್ಯಾಡ್ ಸಮೀಪ ಬೆಂಕಿ ಕಿಡಿಯಿಂದ ಮೈದಾನದಲ್ಲಿ ಹುಲ್ಲಿಗೆ ಬೆಂಕಿ ಹೊತ್ತುಕೊಂಡಿತ್ತು. ತಕ್ಷಣ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.