ಬೆಂಗಳೂರು : ಆಧಾರ್ ಕಾರ್ಡ್‌ ಅನ್ನು ಅನ್‌ಲೈನ್‌ನಲ್ಲಿ ಉಚಿತವಾಗಿ ಪರಿಸ್ಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಅವಕಾಶ ನೀಡಿದೆ.

ನಿಮ್ಮ ಆಧಾರ್ ಕಾರ್ಡ್ ಗೆ ಹತ್ತು ವರ್ಷ ತುಂಬಿದ್ದರೆ 10ಕ್ಕಿಂತ ಹಳೆಯದಾದ ಆಧಾ‌ರ್ ಕಾರ್ಡ್‌ನಲ್ಲಿ ತಮ್ಮ ಫೋಟೊ ಮತ್ತು ಇತರ ಮಾಹಿತಿಯನ್ನು ಅಪ್‌ಡೇಟ್ ಮಾಡಲು ‘ಯುಡಿಪಿಐ ಈ ಅವಕಾಶ ಕಲ್ಪಿಸಿದೆ. ಈ ಮುಲಕ ತಮ್ಮ ಗುರುತಿನ ವಿಳಾಸ ಮತ್ತು ವಿಳಾಸದ ಪುರಾವೆಗಳನ್ನು ನವೀಕರಿಸಲು ಯುಡಿಎಐ ಅವಕಾಶ ಒದಗಿಸಿದೆ.

ಜೂ.14ರ ತನಕ ಯಾವುದೇ ಶುಲ್ಕವಿಲ್ಲದೇ ಸಾರ್ವಜನಿಕರು ಆಧಾ‌ರ್ ‌‌ನಲ್ಲಿ ತಮ್ಮ ಹೆಸರು, ಲಿಂಗ, ಫೋಟೊ, ಮೊಬೈಲ್‌ ಸಂಖ್ಯೆಯಂತಹ ಯಾವುದೇ ಮಾಹಿತಿಯನ್ನು ಅಪ್‌ಡೇಟ್
ಮಾಡಬಹುದು. ಮೊದಲು ಈ ಸೇವೆಗೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿತ್ತು.

ಅಧಾರ್ ಅನ್ನು ಉಚಿತವಾಗಿ ಆಪ್‌ ಡೇಟ್ ಮಾಡಲು hps://myaadhaar uidalgovin ಪೋರ್ಟಲ್‌ ಭೇಡಿ ನೀಡಬೇಕು. ನೀವು ಆಧಾರ್ ಕೇಂದ್ರಕ್ಕೆ ಹೋಗಿ ಮಾಹಿತಿಯನ್ನು ಅಪ್ ಡೆಟ್ ಮಾಡಲು ಬಯಸಿದರೆ ಮೊದಲಿ ನಂತೆಯೇ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಎಂದು ಯುಐಡಿಎಐ ಸಷ್ಟಿಕರಣ ನೀಡಿದೆ