ಸುದ್ದಿಬಿಂದು ಬ್ಯೂರೋ
ಕಾರವಾರ : ಹಿಂದೂ ದೇವತೆಗಳನ್ನು ನಿಂದಿಸಿದ್ದ ವ್ಯಕ್ತಿಯ ವಿಡಿಯೋ ರೆಕಾರ್ಡ್(video record) ಮಾಡಿದ್ದ ಉತ್ತರಕನ್ನಡ(Utarakannda)ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ವ್ಯಕ್ತಿ ನಿನ್ನೆ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಆತ್ಮಹತ್ಯೆಗೆ ಆ ವ್ಯಕ್ತಿಗಳೆ ಕಾರಣ ಎಂದು ಡೆತ್‌ ನೋಟ್(suicide note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪತ್ರ ಇದೀಗ ಬಹಿರಂಗವಾಗಿದೆ.

ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಮೂವತ್ತೈ ವರ್ಷದ ಮಾರುತಿ ನಾಯ್ಕ ಎಂಬಾತ ನಿನ್ನೆ ತನ್ನ ಮನೆಯೊಳಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾ‌ನೆ. ನನ್ನ ಆತ್ಮಹತ್ಯೆಗೆ ಪೊಲೀಸರು ಹಾಗೂ ಎಲಿಷಾ ಕುಟುಂಬಸ್ಥರು ಕಾರಣವೆಂದು ಆತ್ಮಹತ್ಯೆಗೂ ಮುನ್ನ ತನ್ನ ಪುತ್ರನ ಚಡ್ಡಿಯ ಕಿಸೆಯಲ್ಲಿ ಸುಸೈಡ್ ನೋಟ್ ಇಟ್ಟು ಪತ್ನಿಗೆ ನೀಡಲು ಹೇಳಿದ್ದ ಎನ್ನಲಾಗಿದೆ.

ಡೆತ್ ನೋಟ್‌ನಲ್ಲಿ ಪೊಲೀಸ(police) ಸಿಬ್ಬಂದಿ ದೇವರಾಜ, ಎಲಿಷಾ ಕುಟುಂಬಸ್ಥ ಬಸವರಾಜ, ಸುರೇಶ್, ನಾಗಮ್ಮ ಹೆಸರುಗಳನ್ನ ನಮೂದಿಸಿದ್ದಾನೆ‌. ಇದೀಗ ಆತನ ಪತ್ನಿ ರಾಧಾ ಪತಿ ಸಾವಿಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾಳೆ. ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.