ಕಾರವಾರ: ಎಲಿಷಾ ಎಲಕಪಾಟಿ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಎನ್ನಲಾದ ಆಡಿಯೋವನ್ನ ವೈರಲ್ ಮಾಡಿದ್ದ ಮಾರುತಿ ನಾಯಕ ಎಂಬಾತ ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರವಾಡದಲ್ಲಿ ನಡೆದಿದೆ.

ಮಾರುತಿ ನಾಯ್ಕ(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತನ ಪತ್ನಿ ಕೆಲಸಕ್ಕೆ ಹೋಗಿದ್ದು, ಈತನ ಇಬ್ಬರೂ ಮಕ್ಕಳು ಮನೆಯ ಹೊರಗಡೆ ಆಟವಾಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಆತ ಮನೆಯ ಕೋಣೆಯಲ್ಲಿ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನೂ ಈತ ಕಳೆದ ಕೆಲ ದಿನಗಳಿಂದ ಯಾವುದೋ ಒಂದು ವಿಚಾರವನ್ನ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ಎನ್ನಲಾಗಿದೆ‌.ಆದರೆ ಇದುವರೆಗೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನ ಕಾರವಾರದ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಪೊಲೀಸರ ತನಿಖೆ ಬಳಿಕ ಆತ್ಮಹತ್ಯೆಯ ನಿಖರತೆ ಗೋತ್ತಾಗಲಿದೆ.


: