ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಇಲ್ಲಿ‌‌‌ನ ಸರಕಾರಿ ಆಸ್ಪತ್ರೆಯಲ್ಲಿ ಗಾರೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೋರ್ವನ ಕೊಲೆ‌ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಯ ಮೊಬೈಲ್‌ನಿಂದಲ್ಲೆ ಕೊಲೆ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಕುಮಟಾದ ಸರಕಾರಿ ಆಸ್ಪತ್ರೆಯ ಗಾರೆ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯಿಂದ ಆಗಮಿಸಿದ ನಾಲ್ವರು ಗಾರೆ‌ ಕೆಲಸ ಮಾಡಿಕೊಂಡಿದ್ದರು.ನಿನ್ನೆ (ರವಿವಾರ ರಾತ್ರಿ) ನಾಲ್ವರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ವೇಳೆ ನಾಲ್ವರ ಪೈಕಿ ಮೊಯದ್ದೀನ್ ಎಂಬಾತ ಊಟ ಮಾಡಿ ನಿದ್ರೆ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಇನ್ನಿಬ್ಬರಾದ ಮೌನೇಶ್ ಹಾಗೂ ಸಾಧಿಕ್ ಇಮ್ತಿಯಾಜ್ ಜೊತೆ ಗಲಾಟೆ ನಡೆದಯ, ಮೂವರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಮೌನೇಶ್ ಹಾಗೂ ಸಾಧಿಕ್ ಇಬ್ಬರೂ ಸೇರಿ ಇಮ್ತಿಯಾಜ್‌‌ ಎಂಬಾತನಿಗೆ ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಿದ್ದಾರೆ‌.

ಇನ್ನೂ ಕೊಲೆಯಾದ ಬಳಿಕ ಆರೋಪಿಗಳು ಪರಾರಿಯಾಗುವ ವೇಳೆ ಕೊಲೆಯಾದ ಇಮ್ತಿಯಾಜ್ ಬಳಸುತ್ತಿದ್ದ ಮೊಬೈಲನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ.ಘಟನೆ ಬಳಿಕ ತನಿಖೆಗೆ ಇಳಿದ ಪೊಲೀಸರು ಇಮ್ತಿಯಾಜ್ ಮೊಬೈಲ್‌ಗಾಗಿ ಹುಡುಕಾಟ ನಡೆಸಿದ್ದು.‌ಈ ವೇಳೆ ಮೊಬೈಲ್ ಆರೋಪಿಗಳೆ ಎತ್ತಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ ,ಆ ಮೊಬೈಲ್ ಸಿಗ್ನಲ್ ಆಧಾರಲ್ಲೆ‌ ಪೊಲೀಸರು‌ ಹುಬ್ಬಳ್ಳಿಗೆ ತೆರಳಿ ಇಬ್ಬರೂ ಕೊಲೆ ಆರೋಪಿಗಳನ್ನ ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ..

ಗಮನಿಸಿ