ರಾಜಕೀಯ, ಮಡಿವಂತಿಕೆ ಕಳೆದುಕೊಳ್ಳುತ್ತಿದೆ ಅನ್ನೋದಕ್ಕೆ ಹಾಸನದ ಈ ಘಟನೆ ಸಾಕ್ಷಿಯಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇರುತ್ತಿದ್ದಂತೆ ಹಾಸನದ ರಾಜಕೀಯದಲ್ಲಿ ವ್ಯಕ್ತಿಯೊಬ್ಬರ ಅಶ್ಲೀಲ ತುಣುಕುಗಳು ಹರಿದಾಡುತ್ತಿವೆ.
ನಾಡಿನುದ್ದಕ್ಕೂ ರಾಜಕಾರಣದ ಬೇರು ಹೊಂದಿರುವ ಪಕ್ಷವೊಂದರ ಯುವ ನಾಯಕನಿಗೆ ಸಂಬಂದಪಟ್ಟಿವೆ ಎಂದು ಹೇಳಲಾದ ಅಶ್ಲೀಲ ತುಣುಕುಗಳನ್ನು ವೈರಲ್ ಮಾಡಲಾಗಿದೆ..
ಇದನ್ನೂ ಓದಿ
- ಒಳ್ಳೆ ದಿನ ನೋಡಿ ಹೆಬ್ಬಾರ್ ಕಾಂಗ್ರೇಸ್ಗೆ ಬರತ್ತಾರೆ : ಸಚಿವ ಮಂಕಾಳು ವೈದ್ಯ
- ಬಿ ಕೆ ಹರಿಪ್ರಸಾದ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
- ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಗಜಾನನ ಗೌಡ ಶವ ಪತ್ತೆ
ಎಪ್ರಿಲ್ 26 ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮತದಾನಕ್ಕೂ ಮುನ್ನ ವೈರಲ್ ಆಗಿರುವ ಅಶ್ಲೀಲ ತುಣುಕುಗಳು ಹಾಸನದ ಜನರನ್ನು ಹೈರಾಣಾಗಿಸಿದೆ ಎನ್ನಲಾಗಿದೆ. ನಗ್ನ ರಾಜಕಾರಣ, ದ್ವೇಷ, ಅಸೂಯೆಯ ರಾಜಕಾರಣಕ್ಕೆ ಕಾರಣವಾಗಿದೆ ಎನ್ನಲಾಗಿದೆ.