suddibindu.in
ಕಾರವಾರ : ಕುಮಟಾ ಬ್ಲಾಕ್ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗುತ್ತಿದೆ ಎನ್ನುತ್ತಿರುವಾಗಲೇ ಮತ್ತೆ ಒಳಗೊಳಗೆ ಒಂದಿಷ್ಟು ಭಿನ್ನಾಭಿಪ್ರಾಯ ಉಂಟಾಗತ್ತಾ ಇದೆ ಎನ್ನಲಾಗಿದೆ.ಇದಕ್ಕೆ ಬ್ಲಾಕ್ ಹೊಣೆಗಾರಿಕೆ ಹೊತ್ತವರೆ ಕಾರಣ ಅಂತಾ ಪಕ್ಷದ ಪ್ರಮುಖರು ಮಾತ್ನಾಡಿಕೊಳ್ಳತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಿಲ್ಲ‌ ಎನ್ನುವ ಮಾತು ಕೇಳಿಬರಲಾರಂಭಿಸಿದೆ
.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ್ತ ಅಭ್ಯರ್ಥಿ ನಿವೇದಿತಾ ಆಳ್ವಾ ಕ್ಷೇತ್ರದ ಮೇಲೆ ಯಾವುದೆ ಹಿಡಿತ ಸಾಧಿಸಲು ಆಗದೆ ಇದ್ದರೂ ಸಹ ಒಳಗೊಳಗೆ ಪಕ್ಷಕ್ಕೆ ದೊಡ್ಡ ಹೊಡೆತ ನೀಡುತ್ತಿದ್ದರು ಎನ್ನುವ ಬಗ್ಗೆ ಕ್ಷೇತ್ರದ ತುಂಬಾ ವ್ಯಾಪಕ ಚರ್ಚೆ ಸಹ ಉಂಟಾಗುತ್ತಲೆ ಬಂದಿದೆ. ಆದರೆ ಅವರ ಗರಡಿಯಲ್ಲೆ ಬೆಳೆದು ಅವರ ಕೃಪಾಶಿರ್ವಾದದಿಂದ ಅಧ್ಯಕ್ಷ ಪಟ್ಟವನ್ನ ಗಿಟ್ಟಿಸಿಕೊಂಡ ನಿವೇದಿತಾ ಸಹಚರ ಭೂವನ್ ಓರ್ವ ಯುವಕನಾಗಿದ್ದು ಎಲ್ಲರನ್ನ ಒಗ್ಗೂಡಿಸಿಕೊಂಡು ಹೋಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ.ಅಂದುಕೊಂಡಂತೆ ಯಾವುದು ನಡೆಯುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ

ಯಾವಾಗ ಮಾಜಿ ಶಾಸಕಿ ಶಾದರಾ ಶೆಟ್ಟಿ ಅವರು ವಾಪಸ್ ಕಾಂಗ್ರೆಸ್ ‌ನಲ್ಲಿ ಸಕ್ರೀಯರಾದ್ರೋ ಅಂದಿನಿಂದ ಕುಮಟಾ ಬ್ಲಾಕ್‌ನಲ್ಲಿ ಎಲ್ಲರೂ ಒಂದಾದರೂ ಭಾಗ್ಚತ ಭಾಗಾಕಾರ ಮಾತ್ರ ಹೊಂದಾಣಿಕೆ ಆಗತ್ರಾ ಇಲ್ಲ ಎನ್ನಲಾಗಿದೆ.ಮತ್ತೆ ಭಿನ್ನಮತ‌ ಉಂಟಾಗುತ್ತಿದೆ ಎನ್ನಲಾಗಿದೆ.‌ಇದಕ್ಕೆಲ್ಲಾ ಬ್ಲಾಕ್ ಜವಾಬ್ದಾರಿ ಹೊತ್ತವರೆ ಕಾರಣ ಎನ್ನಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಕುಮಟಾ ಬ್ಲಾಕ್ ನಲ್ಲ ಇನ್ನಷ್ಟು ಭಿನ್ನಮತ ಉಂಟಾಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಇನ್ನೂ ಬೆಳೆಯ ಬೇಕಾದ ಕುಮಟಾ ಬ್ಲಾಕ್ ಅಧ್ಯಕ್ಷರು ಯಾರದೋ ಮಾತು ಕೇಳಿ ತಮ್ಮ ರಾಜಕೀಯ ಭವಿಷ್ಯವನ್ನ ಹಾಳು ಮಾಡಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಬೇಕಾಗುತ್ತಿದೆ. ಚುನಾವಣೆಯಲ್ಲಿ. “ಅದೆಲ್ಲಾ ಇರುತ್ತದೆ” ಎನ್ನುವ ಮಾತುಗಳನ್ನ ಬದಲಿಸಬೇಕಿದೆ ಎಂದು ಆವರ ಆಪ್ತರೆ ಆಡಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲ ಮುಖಂಡರು ಪಕ್ಷಕ್ಕಿಂತ ಓರ್ವ ವ್ಯಕ್ತಿಯ ಪರ ಎಷ್ಟೆ ಕೆಲಸ ಮಾಡಿದ್ದರೂ ಸಹ ಕ್ಷೇತ್ರದ ಮತದಾರರು,ಮಾತ್ರ ಈ ಬಾರಿ ಪಕ್ಷದ ಅಭ್ಯರ್ಥಿಯ ಗೆಲ್ಲಿಸಲೇ ಬೇಕೆಂದು ತೀರ್ಮಾನಿಸಿರುವಂತಿದೆ. ಆದರೆ ಇವರು ಆಡಿಕೊಳ್ಳುತ್ತಿರುವಂತೆ ಮಾಧ್ಯಮಗಳು ಎಂದು ಯಾರ ಒತ್ತಡಕ್ಕೆ ಒಳಗಾಗಿ ಎಂದು ಸುದ್ದಿ ಮಾಡಲ್ಲ ಎನ್ನುವುದನ್ನ ಇವರು ತಿಳಿದುಕೊಳ್ಳಬೇಕು. ಮಾಧ್ಯಮಗಳು ಎಂದು ಜನರ ಮನಸ್ಥಿತಿಯನ್ನ ಅರಿತುಕೊಂಡೆ ಸುದ್ದಿ ಮಾಡುತ್ತದೆ. ಯಾವೇಲ್ಲಾ ಮುಖಂಡರು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ವ್ಯಕ್ತಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ ಎನ್ನುವುದನ್ನ ಮುಂದಿನ ದಿನದಲ್ಲಿ ಏಳೆಯೆಳೆಯಾಗಿ ಬಿಚ್ಚಿಡಲಾಗುವುದು.