suddibindu.in
Karwar: ಕಾರವಾರ: ಪದ್ಮಶ್ರೀ ತುಳಸಿ ಗೌಡ ಅವರು ಅನಾರೋಗ್ಯದಿಂದಾಗಿ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ತುಳಸಿ ಗೌಡ ಅವರು ನಿನ್ನೆ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗಿದ್ದು, ತೀರಾ ಆರೋಗ್ಯ ಹದಗೆಟ್ಟು ಅಸ್ವಸ್ಥರಾಗಿದ್ದರು. ಇಂದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದ ಮಾಧವ ನಾಯಕರು, ಅವರನ್ನು ಜಿಲ್ಲಾ ಆಸ್ಪತ್ರೆಯ ಐ. ಸಿ ಯುನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದರು.
ಇದನ್ನೂ ಓದಿ
- ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 3 ದಿನ ರೆಡ್ ಅಲರ್ಟ್
- Gold prices continue to fall: Today’s gold and silver rates ಸತತವಾಗಿ ಕುಸಿತ ಕಾಣುತ್ತಿರುವ ಚಿನ್ನದ ಬೆಲೆ : ಇಂದಿನ ಚಿನ್ನ-ಬೆಳ್ಳಿ ದರ
- 1ಅಡಿ 2 ಇಂಚು ಉದ್ದದ ಚಾಕು ನುಂಗಿದ ನಾಗರಹಾವನ್ನು ರಕ್ಷಿಸಿದ ಸ್ನೇಕ್ ಪವನ್
ಶಾಸಕ ಸತೀಶ್ ಸೈಲ್ ಮತ್ತು ಡಾ. ಅಂಜಲಿ ನಿಂಬಾಳ್ಕರ್ ಅವರು ಕೂಡ ವಿಷಯ ತಿಳಿದು ತುಳಸಿ ಗೌಡರ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದ ಮಾಹಿತಿ ಪಡೆದು ಉತ್ತಮ ವೈದ್ಯಕೀಯ ಔಷಧೋಪಚಾರ ಮಾಡುವಂತೆ ಸೂಚಿಸಿದ್ದಾರೆ.