suddibindu.in
Manipal :ಮಣಿಪಾಲ: ದ್ವೀತಿಯ ಬಿಎಸ್ಸಿ(Bsc student) ಓದುತ್ತಿದ್ದ ವಿದ್ಯಾರ್ಥಿ ಓರ್ವ ಮಹಡಿಯೊಂದರಿಂದವ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲ ಕಾಲೇಜಿನಲ್ಲಿ ನಡೆದಿದೆ.

ಮಾಣಿಪಾಲದ ಮಾಹೆಯ ಎಂಸಿಎಚ್‌ಪಿ ವಿಭಾಗದ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಬಿಹಾರ(Bihar)ಮೂಲದ ಸತ್ಯಂ ಸುಮನ್ (20) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಮಾಡಿಕೊಂಡ ವಿದ್ಯಾರ್ಥಿ ಆಗಿದ್ದಾನೆ.

ಈತ ಕಳೆದ ನಾಲ್ಕುದಿನಗಳ ಹಿಂದೆ ನಡೆದ ಪರೀಕ್ಷಾ ಸಂದರ್ಭದಲ್ಲಿ ಮೊಬೈಲ್ (Mobile)ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಅಂದು ಶಿಕ್ಷಕರು ವಿದ್ಯಾರ್ಥಿ ಸತ್ಯಂ‌ಗೆ ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್(Manipal Police)ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.