suddibindu.in
ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಮಂಗಳವಾರ
ತಿಥಿ : ಏಕಾದಶಿ ತಿಥಿಯು ಹಗಲು.11.47 ರವರೆಗು ಇದ್ದು ಆನಂತರ ದ್ವಾದಶಿ ಆರಂಭವಾಗುತ್ತದೆ.
ನಕ್ಷತ್ರ : ಆರ್ದ್ರೆ ನಕ್ಷತ್ರವು ಹ.02.07 ರವರೆಗು ಇರುತ್ತದೆ. ಆನಂತರ ಪುನರ್ವಸು ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆ.06.43
ಸೂರ್ಯಾಸ್ತ : ಸ.06.23
ರಾಹುಕಾಲ : ಮ.03.00 ರಿಂದ ಮ.04.30


ಈ ದಿನದ ಅದೃಷ್ಟದ ಸಂಖ್ಯೆ 7-3-0-8

ಮೇಷ ರಾಶಿ : ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಮುನ್ನಡೆ ಸಾಧಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆತುರ ಪಡೆದೆ ಹೋದಲ್ಲಿ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳು ಅಧಿಕವಾದ ಆತ್ಮವಿಶ್ವಾಸದ ಕಾರಣ ತಪ್ಪು ನಿರ್ಧಾರ ಕೈಗೊಳ್ಳಬಹುದು. ಪೋಷಕರ ಮತ್ತು ಶಿಕ್ಷಕರ ನಡುವಿನ ಅನುಬಂಧ ಮುಖ್ಯವಾಗುತ್ತದೆ. ತಪ್ಪನ್ನು ಮನ್ನಿಸುವ ಕಾರಣ ಎಲ್ಲರ ಪ್ರೀತಿ ವಿಶ್ವಾಸ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ಸುದೀರ್ಘವಾಗಿ ಕಾಡುತ್ತಿದ್ದ ಅನಾರೋಗ್ಯವು ಗುಣವಾಗಲಿದೆ.

ವೃಷಭ ರಾಶಿ : ಹಣ ಇದ್ದಾಗ ಅಗತ್ಯವಿರುವವರಿಗೆ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುವುದಿಲ್ಲ. ವಿದ್ಯಾರ್ಥಿಗಳು ಕರ್ತವ್ಯ ಪಾಲನೆಯಲ್ಲಿ ನಿರತರಾಗುತ್ತಾರೆ. ತಂದೆಯ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಉಂಟಾಗಲಿವೆ. ಆದರೆ ಮೌನವೊಂದೇ ಗೆಲುವಿನ ಮಾರ್ಗ. ಹಠದಬುದ್ಧಿ ಇರುತ್ತದೆ ಆದರೆ ಸಿಡುಕುತನ ಇರುವುದಿಲ್ಲ. ಸಂಗಾತಿಯೊಂದಿಗೆ ಇದ್ದ ಮನಸ್ತಾಪ ಮರೆಯಾಗುತ್ತದೆ.

ಮಿಥುನ ರಾಶಿ : ಉದ್ಯೋಗದಲ್ಲಿ ಸಮಯಭಾವದಿಂದ ಪ್ರಮುಖ ಕಾರ್ಯ ಒಂದು ಅಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಸಮಯ ಜಾರಿದಂತೆ ಶುಭಫಲಗಳು ದೊರೆಯಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗುವ ಸಂಭವವಿಲ್ಲ. ಆದರೆ ಹೆಚ್ಚಿನ ಬಂಡವಾಳ ಹೂಡಬೇಕಾಗಬಹುದು. ಮನೆ ಮಂದಿಯೊಡನೆ ಮಾಡುವ ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿರುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಸಹಾಯ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಆರಂಭದಲ್ಲಿ ಕ್ರಮೇಣವಾಗಿ ಸರಿದಾರಿಗೆ ಬರಲಿದೆ.

ಕರ್ಕ ರಾಶಿ : ಕೌಟುಂಬಿಕ ಕಾರಣಗಳಿಗಾಗಿ ಮಾನಸಿಕ ಒತ್ತಡವಿರುತ್ತದೆ. ತಂದೆಯವರಿಗೆ ಸಂಬಂಧಿಸಿದ ಹಣದ ವಿವಾದವನ್ನು ಪರಿಹರಿಸುವಿರಿ. ಉದ್ಯೋಗದಲ್ಲಿ ಶಾಂತಿಯಿಂದ ನಡೆದುಕೊಂಡರೆ ಹೆಚ್ಚಿನ ಅನುಕೂಲ ಕಂಡು ಬರುತ್ತದೆ. ಸಂಗಾತಿಯು ಅವಶ್ಯವಿದ್ದಲ್ಲಿ ಹಣದ ಸಹಾಯ ಮಾಡುವರು. ವಿದ್ಯಾರ್ಥಿಗಳು ಸರಳವಾದ ಮಾದರಿಯಲ್ಲಿ ವಿದ್ಯಾಭ್ಯಾಸದಲ್ಲಿ ಮುನ್ನಡೆಯುತ್ತಾರೆ. ತೆಗೆದುಕೊಂಡ ಹಣವನ್ನು ಮರಳಿ ನೀಡಬೇಕಾದಾಗ ವೇಳೆ ಸಹನೆ ಕಳೆದುಕೊಳ್ಳುವಿರಿ. ಹಣದ ವ್ಯವಹಾರದ ವೇಳೆ ಎಚ್ಚರಿಕೆ ಇರಲಿ.

ಸಿಂಹ ರಾಶಿ : ಕುಟುಂಬದ ಒಗ್ಗಟ್ಟನ್ನು ಕಾಪಾಡಲು ಯಾವುದೇ ತ್ಯಾಗ ಮಾಡಬಲ್ಲಿರಿ. ಉದ್ಯೋಗದಲ್ಲಿ ಮತ್ತೊಮ್ಮೆ ನಿಮ್ಮ ಅಗತ್ಯತೆಯನ್ನು ಸಾಬೀತು ಮಾಡುವಿರಿ. ವಿದ್ಯೆಯನ್ನು ಮೀರಿದ ಸವಾಲುಗಳನ್ನು ಸಹ ಗೆಲ್ಲುವಿರಿ. ಉದ್ಯೋಗದಲ್ಲಿ ಮೆಚ್ಚುಗೆಯ ಜೊತೆಯಲ್ಲಿ ವೇತನವು ಹೆಚ್ಚಲಿದೆ. ವ್ಯಾಪಾರ ವ್ಯವಹಾರಗಳು ಹಳಿ ತಪ್ಪದಂತೆ ನೋಡಿಕೊಳ್ಳುವಿರಿ. ನಿಗದಿಪಡಿಸಿದ ಅವಧಿಗೂ ಮುಂಚೆ ವಿದ್ಯಾರ್ಥಿಗಳು ಕರ್ತವ್ಯವನ್ನು ಪೂರೈಸುತ್ತಾರೆ. ಸೋಲೆಂಬ ಭಯವಿಲ್ಲದೆ ಮುಂದುವರೆಯಬಹುದು. ಆದರೆ ಆತುರದ ನಿರ್ಧಾರಗಳು ಒಳ್ಳೆಯದಲ್ಲ

ಕನ್ಯಾ ರಾಶಿ: ಹತ್ತಿರದ ಸಂಬಂಧಿವೊಬ್ಬರ ತೊಂದರೆಯು ನಿಮ್ಮಿಂದಾಗಿ ಬಗೆಹರಿಯುತ್ತದೆ. ಧಾರ್ಮಿಕ ಕಾರ್ಯಕ್ರಮವೊಂದ ನೇತೃತ್ವ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಗೆ ಸ್ಪೂರ್ತಿಯ ಸೆಲೆಯಾಗುವಿರಿ. ಯಾವುದೇ ಆತಂಕಗಳು ಇರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ನಷ್ಟವನ್ನು ಪರಿಗಣಿಸದೆ ಮುಂದುವರೆಯುವಿರಿ. ವಿದ್ಯಾರ್ಥಿಗಳು ಬೇಸರದಿಂದ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಅವಿರತ ದುಡಿಮೆಯ ಫಲವಾಗಿ ವಿಶ್ರಾಂತಿಯನ್ನು ಬಯಸುವಿರಿ

ತುಲಾ ರಾಶಿ : ಉದ್ಯೋಗದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಬೇರೆಯವರಿಗೆ ಬುದ್ಧಿವಾದ ನೀಡುವುದರಲ್ಲಿ ಸಂತಸಗೊಳ್ಳುವಿರಿ. ದಂಪತಿಗಳಲ್ಲಿ ಇದ್ದ ಅನುಮಾನದ ಸುಳಿವು ಹುಸಿಯಾಗುತ್ತದೆ. ಹಠದಿಂದ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.

ವೃಶ್ಚಿಕ ರಾಶಿ : ಲಾಭದಾಯಕ ಕೆಲಸ ಕಾರ್ಯಗಳನ್ನು ಮಾತ್ರ ಆಯ್ದುಕೊಳ್ಳುವಿರಿ. ಕಷ್ಟದ ಸಮಯದಲ್ಲಿಯೂ ಉತ್ತಮ ಮಟ್ಟದ ಹಣ ನಿಮ್ಮ ಬಳಿ ಇರುತ್ತದೆ. ಕುಟುಂಬದ ಎಲ್ಲರ ನಂಬಿಕೆಗೆ ಪಾತ್ರರಾಗುವಿರಿ. ಉದ್ಯೋಗದಲ್ಲಿ ಹಿನ್ನೆಡೆ ಇದ್ದರು ಸರಿಪಡಿಸಬಲ್ಲಿರಿ. ವ್ಯಾಪಾರ ವ್ಯವಹಾರಗಳಲ್ಲಿ ಬುದ್ಧಿವಂತಿಕೆಯ ನಿರ್ಧಾರಗಳು ಲಾಭಕ್ಕೆ ಕಾರಣವಾಗಲಿದೆ. ಮನೆಗಿಂತಲೂ ಹೆಚ್ಚಿನ ವೇಳೆಯನ್ನು ಕಛೇರಿಯಲ್ಲಿ ಕಳೆಯುವಿರಿ. ಬೇರೆಯವರ ಬಳಿ ಹಣ ಕೇಳದೆ ಇರುವ ಹಣದಲ್ಲಿ ದಿನ ಕಳೆಯುವಿರಿ

ಧನು ರಾಶಿ : ಮನಸ್ಸಿನಲ್ಲಿ ಗೆಲುವಿನ ಬಗ್ಗೆ ಚಿಂತೆ ಇರುತ್ತದೆ. ಆದ್ದರಿಂದ ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಗೆಲುವು ಸಾಧಿಸಬಹುದು. ವ್ಯಾಪಾರ ವ್ಯವಹಾರಗಳಲ್ಲಿ ತಾಯಿಯವರ ನೆರವು ಮತ್ತು ಸಲಹೆಯನ್ನು ಅವಲಂಬಿಸುವಿರಿ. ಉದ್ಯೋಗದಲ್ಲಿ ಎಲ್ಲರಿಂದಲೂ ದೂರವಿದ್ದು ಏಕಾಂಗಿತನವನ್ನು ಬಯಸುವಿರಿ. ಹಣಕಾಸಿನ ಯೋಜನೆಗಳಲ್ಲಿ ಕೂಡಿದ್ದ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುವಿರಿ. ಶುಭ ಸುದ್ದಿ ಬರಲಿದೆ

ಮಕರ ರಾಶಿ : ಆಶ್ಚರ್ಯಕರ ರೀತಿಯಲ್ಲಿ ಸಮಸ್ಯೆ ಬಗೆಹರಿಯಲಿದೆ. ಪ್ರಯೋಜನವೆನಿಸುವ ಕೆಲಸಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಿ. ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿಸಿದ ಯಶಸ್ಸು ತಮ್ಮದಾಗಿಸಿಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ವಿರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರವಾಸಿ ತಾಣಕ್ಕೆ ಭೇಟಿ ನೀಡುವಿರಿ. ಹಿರಿಯ ಸೋದರನ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ವಾದ ವಿವಾದ ಎದುರಾಗಲಿದೆ.

ಕುಂಭ ರಾಶಿ : ಉದ್ಯೋಗದಲ್ಲಿ ಅಧಿಕಾರಿಗಳಾಗಿದ್ದಲ್ಲಿ ಸಹೋದ್ಯೋಗಿಗಳ ವಿರೋಧವನ್ನು ಎದುರಿಸಬೇಕು. ಸಹನೆ ಕಳೆದುಕೊಳ್ಳದೆ ವರ್ತಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಪಾಲುಗಾರಿಕೆಯ ವ್ಯವಹಾರವಿದ್ದಲ್ಲಿ ತೊಂದರೆ ಉಂಟಾಗಬಹುದು. ಸಿಡುಕುವ ಬದಲು ಬುದ್ಧಿವಂತಿಕೆಯಿಂದ ವ್ಯವಹರಿಸಿ. ಆದಾಯಕ್ಕಿಂತಲೂ ಖರ್ಚು ವೆಚ್ಚಗಳು ಹೆಚ್ಚುತ್ತವೆ.

ಮೀನ ರಾಶಿ : ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಪರಿಸ್ಥಿತಿಯನ್ನು ಸುಧಾರಿಸಲು ದಿಟ್ಟ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಸತತವಾಗಿ ಬದಲಿಸುವ ಮನಸ್ಸು ತೊಂದರೆಗೆ ಕಾರಣವಾಗಬಹುದು. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಬೇಸರವನ್ನು ಉಂಟು ಮಾಡಬಹುದು.ಉದ್ಯೋಗವನ್ನು ಬದಲಾಯಿಸುವ ಅವಕಾಶ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.