suddibindu.in
ಕಾರವಾರ : ಕ್ರೀಡಾ ಪ್ರತಿಭೆಗಳನ್ನ ಮುನ್ನೆಲೆಗೆ ತರುವ ಕೆಲಸವಾಗಬೇಕಿದೆ. ದೈಹಿಕ ಹಾಗೂ ಮಾನಸಿಕವಾಗಿ ನೆಮ್ಮದಿಯಿಂದ ಇರಲು ಕ್ರೀಡೆ ಅವಶ್ಯಕವಾಗಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳುವ ಮೂಲಕ ಡೆನ್ಮಾರ್ಕ್ ನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಲಿರುವ ರಾಜೇಶ ಮಡಿವಾಳ ಅವರಿಗೆ 20 ಸಾವಿರ ಸಹಾಯ ಧನ ನೀಡಿ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ.
ಕ್ರೀಡೆಯಲ್ಲಿ ನಮ್ಮ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸುವಂತಾಗಬೇಕು.ಈಗಾಗಲೇ ಸಾಕಷ್ಟು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ರಾಜೇಶ ಮಡಿವಾಳ ಅವರು ನಮ್ಮ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದ್ದಾರ. ಈ ಭಾರೀಯೂ ಸಹ ಸಾಧನೆ ಮಾಡುವ ಮೂಲಕ ಚಿನ್ನದ ಪದಕವನ್ನ ತರುವಂತಾಗಲಿ ಎಂದು ಶಾಸಕ ಸೈಲ್ ಶುಭ ಹಾರೈಸಿದ್ದಾರೆ.
ರಾಜೇಶ ಮಡಿವಾಳ ಅವರು ಕುಮಟಾದ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದು, ಇವರು ಈಗಾಗಲೇ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡೆಯಲ್ಲಿ ಪದಕಗಳನ್ನ ಗೆದ್ದುಕೊಂಡಿದ್ದಾರೆ. ರಾಜೇಶ ಮಡಿವಾಳ ಬಾಡಿ ಬಿಲ್ಡಿಂಗ್, ಪವರ್ ಲಿಫ್ಟಿಂಗ್ ನಲ್ಲಿ ಭಾಗವಹಿಸಿ ಈಗಾಗಲೇ ಎರಡು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇನ್ನೂ ಈ ವರ್ಷ ಹಾಂಕಾಂಗ್ ನಲ್ಲಿ ನಡೆದ ಏಶಿಯನ್ ಪವರ್ ಲಿಫ್ಟಿಂಗ್ ನಲ್ಲಿ ಭಾರತ ತಂಡದಿಂದ ಭಾಗವಹಿಸಿ ನಾಲ್ಕು ಬೆಳ್ಳಿ ಪದಕವನ್ನ ಗೆದ್ದುಕೊಂಡಿದ್ದಾರೆ.
ಇದೀಗ ಡೆನ್ಮಾರ್ಕ್ ನಲ್ಲಿ ನಡೆಯುವ ವಿಶ್ವ ಅಗ್ನಿಶಾಮಕ ಕ್ರೀಡಾಕೂಟಕ್ಕೆ ಭಾರತ ತಂಡದಿಂದ ರಾಜೇಶ ಮಡಿವಾಳ ಆಯ್ಕೆಯಾಗಿದ್ದು, ಸೆ ೫ರಂದು ತೆರಳಲಿದ್ದಾರೆ. ಈ ವಿಚಾರ ತಿಳಿದ ಕಾರವಾ ಶಾಸಕ ಸತೀಶ ಸೈಲ್ ಅವರು ರಾಜೇಶ ಮಡಿವಾಳವಾಳ ಅವರನ್ನ ಕರೆಸಿಕೊಂಡು ಧನ ಸಹಾಯಮಾಡಿದ್ದಾರೆ.
ಈ ವೇಳೆ ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲುರ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ,ಜಿಲ್ಲಾ ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿ ಸುನಿಲ್ ಕುಮಾರ, ಜಗದೀಶ ಖಾರ್ವಿ, ದರ್ಶನ್ ನಾಯ್ಕ ಅವರ್ಸಾ ಮೊದಲಾದವರು ಉಪಸ್ಥಿರಿದ್ದರು.
ಇದನ್ನೂ ಓದಿ