ಕಳೆದ ಕೆಲ ದಿನಗಳಿಂದ ಏರಿಕೆಯತ್ತ ಸಾಗುತ್ತಿದ್ದ ಬಂಗಾರದ ಬೆಲೆ ಎರಡನೇ ದಿನವಾದ ಇಂದು ಸಹ ಕೊಂಚಮಟ್ಟಿಗೆ ಇಳಿಕೆಯತ್ತ ಮುಖಮಾಡಿದೆ, ಬಂಗಾರ ಪ್ರೀಯರಿಗೆ ಖುಷಿ ತಂದಿದೆ.

ಇಂದು100 ಗ್ರಾಂನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ ರೂ 1,600 ರಷ್ಟು ಇಳಿಕೆಯಾಗಿದೆ. ಇನ್ನು100 ಗ್ರಾಂ 22 ಕ್ಯಾರೆಟ್‌ 18 ಕ್ಯಾರೆಟ್‌ ಚಿನ್ನದ ಬೆಲೆ ರೂ 1,500 ಹಾಗೂ ರೂ 1,200 ರೂ ಇಳಿಕೆಯಾಗಿದೆ ದೇಶಾದ್ಯಂತ ‌ಇಂದು ಚಿನ್ನದ‌ ಬೆಲೆಯಲ್ಲಿ ಇಳಿಕೆಯಾಗಿದೆ.

ಬೆಳ್ಳಿ‌ ಬೆಲೆ‌ ಇಂದು ಸಹ ಸ್ಥಿರವಾಗಿದೆ.1 ಕೆಜಿ ಬೆಳ್ಳಿ ಬೆಲೆ ಇಂದು 86,000 ರೂ. ಇಂದು 100 ಗ್ರಾಂ ಬೆಳ್ಳಿ ಬೆಲೆ 8,600 ರೂಪಾಯಿಗಳಿಗೆ ತಲುಪಿದೆ. ಇನ್ನು 1 ಗ್ರಾಂ ಬೆಳ್ಳಿ ಬೆಲೆ 86 ರೂಪಾಯಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ: 100 ಗ್ರಾಂ ಚಿನ್ನದ ಬೆಲೆ ರೂ 1,600 ರಷ್ಟು ಇಳಿಕೆಯಾಗಿ ರೂ 7,47,300 ಕ್ಕೆ ತಲುಪಿದೆ. , 10 ಗ್ರಾಂ ಹಳದಿ ಲೋಹ ಒಂದೇ ದಿನದಲ್ಲಿ ರೂ 160 ರಷ್ಟು ಇಳಿದು ರೂ 74,730 ಕ್ಕೆ ತಲುಪಿದೆ. 8 ಗ್ರಾಂನಲ್ಲಿ ರೂ. 128 ಇಳಿಕೆಯಾಗಿ ರೂ 59,784 ಕ್ಕೆ ತಲುಪಿದೆ. ಅಲ್ಲದೆ, 1 ಗ್ರಾಂ ಬೆಲೆ 16 ರೂಪಾಯಿ ಇಳಿಕೆಯಾಗಿದ್ದು, 7,473 ರೂಪಾಯಿಗಳಿಗೆ ತಲುಪಿದೆ.

ಗಮನಿಸಿ