ಸುದ್ದಿಬಿಂದು ಬ್ಯೂರೋ
ಕಾರವಾರ : ಸಿಬರ್ಡ್ ನೌಕಾನೆಲೆ ಪ್ರದೇಶದಲ್ಲಿ ಕಳೆದ ಕೆಲ ವರ್ಷದಿಂದ ಎನ್ ಎಸ್ ಎಸ್ ಕಂಪನಿಯಲ್ಲಿ ಗುತ್ತಿಗೆ ಆಧಾರಲ್ಲಿ ಕೆಲಸಮಾಡುತ್ತಿದ್ದ ಉದ್ಯೋಗಿಗಳು ಇಂದು ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್ ಅವರನ್ನ ಭೇಟಿ ಮಾಡಿ ವೇತನ ಹೆಚ್ಚಳ ಸೇರಿದಂತೆ ಕೆಲವು ಬೇಡಿಕೆ ಇಡೇರಿಸಿಕೊಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು..
ತಾವು ಕಳೆದ ಅನೇಕ ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಇದುವರೆಗೆ ವೇತನ ಹೆಚ್ಚಿಸಿಲ್ಲ.ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ದುಡಿಸಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಮಯ ಕೆಲಸ ಮಾಡಿಸಿಕೊಂಡರು ಸಹ ಹೆಚ್ಚುವರಿ ವೇತನ ನೀಡುವುದಿಲ್ಲ. ತಮ್ಮ ವೇತನ ಹೆಚ್ಚಿಸಬೇಕು ಹಾಗೂ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡಿದ ಸಂದರ್ಬದಲ್ಲಿ ಅದರ ಹೆಚ್ಚುವರಿ ವೇತನ ನೀಡಬೇಕು ಎಂದು ಶಾಸಕ ಸೈಲ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸದ ಶಾಸಕ ಸತೀಶ ಸೈಲ್ ಅವರು ತಕ್ಷಣ ಕಂಪನಿಯ ಪ್ರಮುಖರೊಂದಿಗೆ ದೂರವಾಣಿ ಮೂಲಕ ಮಾತು ಕತೆ ನಡೆಸಿದ್ದು, ಉದ್ಯೋಗಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಇದಕ್ಕೆ ಆ ಕಂಪನಿಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಸಮಸ್ಯೆ ಬಗೆಹರಿಸುವುದಾಗಿ ಕಂಪನಿಯ ಪ್ರಮುಖರು ಭರವಸೆ ನೀಡಿದ್ದಾರೆ…
ಗಮನಿಸಿ