ಸುದ್ದಿಬಿಂದು ಬ್ಯೂರೋ ವರದಿ
Sirsi: ಶಿರಸಿ :ಯಲ್ಲಾಪುರದ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್(Shivaram Hebbar)ಒಳ್ಳೆಯ ದಿನ ನೋಡಿ ನಮ್ಮ‌ ಪಕ್ಷಕ್ಕೆ ಬರತ್ತಾರೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ( Minister Mankal vaidya) ಪ್ರತಿಕ್ರಿಯಿಸಿದ್ದಾರೆ.

ಅವರು ಶಿರಸಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕಾಂಗ್ರೇಸ್‌ಗೆ ಶಿವರಾಮ ಹೆಬ್ಬಾರ್ ಬರಲಿದ್ದಾರೆ ಎನ್ನುವ ಚರ್ಚೆ ನಡಿತ್ತಾ ಇದೆ. ಯಾವಾಗ ಬರಬಹುದು ಅಂತಾ ಮಾಧ್ಯದವರು ಸಚಿವರನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತಲೆ ಉತ್ತರಿಸಿದ ಸಚಿವ ಮಂಕಾಳ್ ವೈದ್ಯ ಅವರು ಈಗಾಗಲೇ ಅವರು ಒಂದಲ್ಲ ಎರಡು ಕಾಲನ್ನು ಬಿಜೆಪಿಯಿಂದ ಹೊರಗೆ ಇಟ್ಟಿದ್ದಾರೆಂದು ಪತ್ರಿಕೆಗಳಲ್ಲೆ ಸುದ್ದಿ ಬರತ್ತಾ ಇದೆ.ಯಾವಾಗ ಬರಲಿದ್ದಾರೆ ಎನ್ನುವುದಕ್ಕೆ ನಾನು ಹೇಳೋದಕ್ಕೆ ಆಗಲ್ಲ.

ಅವರೇ ಯಾವಾಗ ಒಳ್ಳೆ ದಿನ ಇದೆ ಆಗ ಅವರು ಬರಬಹುದು ಅದಕ್ಕೆ ಗಡಿಬಿಡಿ ಬೇಡ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಶಿವರಾಮ ಹೆಬ್ಬಾರ್ ಕಾಂಗ್ರೇಸ್ ಸೇರ್ಪಡೆ ಆಗುವ ಬಗ್ಗೆ ಸಚಿವ ಮಂಕಾಳ್ ವೈದ್ಯ ಅವರು ಸುಳಿವು ನೀಡಿದ್ದಾರೆ.

ಗಮನಿಸಿ