suddibindu.in
ಮುಂಡಗೋಡ : ಬೆಂಗಳೂರು “ಕೇಫೆ” ಬಾಂಬ್ ಸ್ಫೋಟ (Bangalore “Cafe” Bomb Blast)ಪ್ರಕರಣ‌ ಏನಿದೆ ಇದು ಚುನಾವಣೆಗಾಗಿ ಬಿಜೆಪಿಯವರೆ ಮಾಡಿರುವ ಸಂಚು ಎಂದ ಸಚಿವ(Minister)ಮಂಕಾಳು ವೈದ್ಯ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ ಚುನಾವಣೆಗಾಗಿ ಬಿಜೆಪಿಯವರು ಏನ್ ಬೇಕಾದ್ರೂ ಮಾಡ್ತಾರೆ.ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಈ ಸಂಚು ಮಾಡಲಾಗಿದೆ. ಇದನ್ನ ಯಾರು, ಯಾವ ಪಕ್ಷದವರು ಮಾಡ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ.ಯಾರೂ ಭಯ ಪಡುವ ಅಗತ್ಯವಿಲ್ಲ.ಈ ಕೃತ್ಯ ಯಾರೇ ಮಾಡಿದ್ದರು ನಮ್ಮ‌ ಸರ್ಕಾರ ಖಂಡಿತವಾಗಿ ಕಠಿಣ ಕ್ರಮ ಜರುಗಿಸುತ್ತದೆ. ಬಿಜೆಪಿಯವ್ರು ಇದುವರೆಗೂ ಯಾವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮಾತಾನಾಡಿದ್ದಾರೆಂದು ಪ್ರಶ್ನಿಸಿದರು.

ಇದನ್ನೂ ಓದಿ

ಬಿಜೆಪಿಯವ್ರು (BJP) ಬಡವರ ಪರವಾಗಿ ಯಾವ ಕಾರ್ಯಕ್ರಮ ನೀಡಿ ಚುನಾವಣೆ ಎದುರಿಸಿದ್ದಾರೆ‌..?ಅವ್ರು ಇದುವರೆಗೂ ಇಂತದ್ದೇ ಮಾಡಿಕೊಂಡು ಚುನಾವಣೆ ಎದುರಿಸಿಕೊಂಡು ಬಂದಿದ್ದಾರೆ. ಈ ಬಾರಿ ಸಹ ಅದನ್ನೆ‌ ಮಾಡತ್ತಿದ್ದಾರೆಂದು ಸಚಿವ ಮಂಕಾಳು ವೈದ್ಯ ಆರೋಪಿಸಿದರು.