ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಮಲೆನಾಡು-ಕರಾವಳಿ ಪ್ರದೇಶಗಳಿಗೆ(Malenadu Coastal Link Highway) ಸಂಪರ್ಕಕಲ್ಲಿಸುವ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ(Kumta-Sirsi highway)766ಇ ಯಲ್ಲಿ ಸೇತುವೆ ಮತ್ತು ರಸ್ತೆ ಕಾಮಗಾರ ನಡೆಸಬೇಕಾಗಿರುವುದರಿಂದ 7ತಿಂಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನ ಸಂಪೂರ್ಣ ಬದಲಿಸಲಾಗುತ್ತಿದೆ ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ ಹೇಳಿದ್ದಾರೆ.
ಹೆದ್ದಾರಿ ಅಗಲೀಕರಣಕ್ಕೆ ಆರ್.ಎನ್.ಎಸ್.ಕಂಪನಿಗೆ ಗುತ್ತಿಗೆ(RN Shetty Company)ನೀಡಲಾಗಿದ್ದು, 2020 ರಲ್ಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ಸಂಚಾರ ಬಂದ್ ಮಾಡಲುವಂತೆ ಈ ಹಿಂದೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.ಇದೀಗ ಹೆದ್ದಾರಿ ಪ್ರಾಧಿಕಾರವು(Highway Authority) ಕೂಡ ಈ ಹೆದ್ದಾರಿಯಲ್ಲಿ ವಾಹನ ಸಂಚಾರದ ಓಡಾಟವನ್ನ ಕಡಿಮೆ ಮಾಡಿ ಕಾಮಗಾರಿಯನ್ನ ಮುಗಿಸಲು ವಾಹನ ಸಂಚಾರ ಬಂದ್ (Traffic Bandh) ಮಾಡುವಂತೆ ಕೋರಿದೆ.
ಮುಂದೆ ಈ ಮಾರ್ಗವಾಗಿ ಸಂಚರಿಸಿ
ವಾಹನ ಸವಾರರಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರದ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಶಿರಸಿ-ಯಾಣ-ವಡ್ಡಿ-ಕುಮಟಾ ಮಾರ್ಗದಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ,ಶಿರಸಿ ಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ಭಾರಿ ವಾಹನಗಳ ಸಹಿತ ಸಂಚಾರಕ್ಕೆ ಅವಕಾಶ . ಘಟ್ಟ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ್ ಮಾಹಿತಿ ನೀಡಿದ್ದಾರೆ.