ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಗಡಿ ತಾಲೂಕಿನಲ್ಲಿರುವ ಕನ್ನಡ ಶಾಲೆಗಳನ್ನ ಮುಚ್ಚಲಾಗುತ್ತಿದ್ದು, ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 13 ಕನ್ನಡ ಶಾಲೆಗಳು ಬಂದ್ ಮಾಡಲಾಗಿದೆ. 2017 ರಿಂದ 2023ರ ವರಗೆ ಕಾರವಾರ ತಾಲೂಕಿನಲ್ಲಿ 13 ಕನ್ನಡ ಶಾಲೆಗಳು ಬಂದ್ ಆಗಿವೆ. ಈ ವರ್ಷದಲ್ಲಿ 3 ಕನ್ನಡ ಶಾಲೆಗಳಿಗೆ ಬೀಗ ಹಾಕಲಾಗಿದೆ.
ವಿದ್ಯಾರ್ಥಿಗಳಿಲ್ಲದೆ ಶೂನ್ಯದಾಖಲಾತಿ ಹಿನ್ನಲೆಯಲ್ಲಿ ಗಡಿ ತಾಲೂಕಿನಲ್ಲಿರುವ ಕನ್ನಡ ಶಾಲೆಗಳನ್ನ ಬಂದ್ ಮಾಡಲಾಗಿದೆ. ಇಂಗ್ಲೀಷ್ ಶಿಕ್ಷಣದ ವ್ಯಾಮೋಹಕ್ಕೆ ಒಳಗಾದ ಪಾಲಕ ತಮ್ಮ ಮಕ್ಕಳನ್ನ ಕನ್ನಡ ಶಾಲೆಗಳನ್ನ ಬಿಟ್ಟು ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸುತ್ತಿರುವುದು ಗಡಿ ತಾಲೂಕಿನ ಕನ್ನಡ ಶಾಲೆಗಳು ಮುಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ.
ಇನ್ನೂ ಪ್ರಮುಖವಾಗಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಸುಸಜ್ಜಿತ ಕಟ್ಟಡಗಳು ಇಲ್ಲದೆ ಇರುವುದು ಸಹ ವಿಧ್ಯಾರ್ಥಿಗಳನ್ನ ಖಾಸಗಿ ಶಾಲೆಗೆ ಕಳಿಸುವಂತಾಗಿದೆ. ಕಾರಣಗಳು ಏನೆ ಆಗಿದ್ದರೂ ಕೂಡ ಸರಕಾಗಳು ಗಡಿ ತಾಲೂಕಿನಲ್ಲಿ ಇರುವ ಕನ್ನಡ ಶಾಲೆಗಳನ್ನ ಮುಚ್ಚಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮೂಲಕ ಒತ್ತಾಯಿಸಲಾಯಿತು.