ಸುದ್ದಿಬಿಂದು ಬ್ಯೂರೋ
ಕುಮಟ : ಮಹಿಳೆ ಬಗ್ಗೆ ಯುವಕನೋರ್ವ ಆಕೆಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಮಾತನಾಡಿದ್ದಾನೆ ಎಂದು ಆರೋಪಿಸಿ ಅಳ್ವೆಕೋಡಿಯಲ್ಲಿ ಅಮಾಯಕ ಯುವಕನಿಗೆ ಚಪ್ಪಲಿಯೇಟು ಹೊಡೆದ ಮಹಿಳೆ ಹಾಗೂ ಆಕೆಗೆ ಪ್ರೋತ್ಸಾಹಿಸಿದ್ದ ವ್ಯಕ್ತಿ ಸೇರಿ ಯುವಕನ ಬಳಿ ಕ್ಷಮೆ ಕೇಳಬೇಕು ಎಂದು ಅಳ್ವೆಕೋಡಿಯ ಪ್ರಜ್ಞಾವಂತ ಗ್ರಾಮಸ್ಥರು ಪೊಲೀಸ ಠಾಣೆ ಎದುರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಅಳ್ವೆಕೋಡಿಯ ಸವಿತಾ ಪಟಗಾರ ಎಂಬುವವರ ಮನೆಗೆ ಅದೆ ಗ್ರಾಮದ ಗಜು ನಾಯ್ಕ ಎಂಬಾತ ಬಂದು ಹೋಗುತ್ತಿದ್ದ ಕುರಿತು ಮಹಿಳೆಗೆ ಯುವಕ ಕೆಟ್ಟ ಪದಗಳನ್ನ ಬಳಸಿದ್ದಾನೆ ಎಂದು ಮಹಿಳೆ ಹಾಗೂ ಗಜು ನಾಯ್ಕ ಸೇರಿಕೊಂಡು ಕೃಷ್ಣ ನಾಯ್ಕ ಎನ್ನುವ ಯುವಕನಿಗೆ ಚಪ್ಪಲ್ಲಿಯಿಂದ ಹೊಡೆದು ಥಳಿಸಿದ್ದರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಯುವಕನ ಮೇಲೆ ಹಲ್ಲೆ ಮಾಡಿದ ಇಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆದರೆ ಇದುವರಗೆ ಯಾವುದೆ ಕ್ರಮ ಆಗದೆ ಇರುವ ಕುರಿತು ಯುವಕನ ಕುಟುಂಬಸ್ಥರು ಹಾಗೂ ಅಳ್ವೆಕೋಡಿಯ ಪ್ರಜ್ಞಾವಂತ ನಾಗರಿಕರು ಇಂದು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಗಜು ನಾಯ್ಕ ಹಾಗೂ ಸವಿತಾ ಪಟಗಾರ ಇಬ್ಬರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜನರುಗಿಸಬೇಕು ಮತ್ತು ಹಲ್ಲೆಗೆ ಒಳಗಾಗಿರುವ ಕೃಷ್ಣ ನಾಯ್ಕ ಬಳಿ ಗಜು ನಾಯ್ಕ, ಸವಿತಾ ಪಟಗಾರ ಕ್ಷಮೆ ಕೇಳಬೇಕು ಇಲ್ಲದೆ ಹೋದರೆ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಊರಿನವರಿಗೆ ವಾರ್ನಿಂಗ್ ಕೊಡೊದಕ್ಕೆ ಇವರು ಯಾರು..?
ಕೃಷ್ಣ ನಾಯ್ಕ ಅವರ ಮೇಲೆ ಹಲ್ಲೆ ಮಾಡುವಾಗ ಮಹಿಳೆ ಕೃಷ್ಣ ನಾಯ್ಕ ತರಹ ಇನ್ನೂ ಮೂರನಾಲ್ಕು ಮಂದಿ ಇದೆ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಅವರಿಗೆ ಕೃಷ್ಣ ನಾಯ್ಕ ತರಹ ಮಾಡಿದರೆ ಉಳಿದವರು ಸುಮ್ಮನಿರತ್ತಾರೆ.ತಪ್ಪು ಮಾಡಿರುವವರ ಬಗ್ಗೆ ಮಾತ್ನಾಡತ್ತಾರೆ. ತಪ್ಪು ಮಾಡದೆ ಇರುವವ ಬಗ್ಗೆ ಯಾಕೆ ಯಾರು ಏನು ಮಾತ್ನಾಡಲ್ಲ.ಹೀಗಿರುವ ಆ ಮಹಿಳೆ ಊರಿನವರಿಗೆ ವಾರ್ನಿಂಗ್ ಕೊಟ್ಟಿದ್ದು ಯಾಕೆ. ಗಜು ಅವರೆ ಮಹಿಳೆ ಚಪ್ಪಲಿ ತೆಗೆದುಕೊಂಡು ಹೊಡಿ ಎಂದು ಪ್ರೋತ್ಸಾಹ ಮಾಡಿದ್ದಾರೆ. ಈ ಎಲ್ಲಾ ಮಾತುಗಳನ್ನ ಕೃಷ್ಣಾ ನಾಯ್ಕ ಪರ ಪ್ರತಿಭಟನೆಗೆ ಬಂದಿದ್ದ ಅಳ್ವೆಕೋಡಿ ಗ್ರಾಮಸ್ಥರು ಹೇಳಿದ್ದು,ಪ್ರತಿಭಟನೆಯಲ್ಲಿ ಏನಾಯತ್ತು ಎನ್ನುವ ವಿಡಿಯೋ ಸಹ ಇದೆ.