suddibindu.in
Sirsi:ಶಿರಸಿ: ರಾಜ್ಯಸಭಾ(Rajya Sabha) ಚುನಾವಣೆಯಲ್ಲಿ ಕಾಂಗ್ರೆಸ್(Congress) ನಮ್ಮಗೆ ಹಣ ಕೊಟ್ಟಿದೆ ಎಂದು ಮಾಜಿ ಸಚಿವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಶಿವರಾಮ ಹೆಬ್ಬಾರ್ (Shivaram Hebbar) ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿಯವರೆ ( Bjp)ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಿದ್ದಾರಲ್ಲ ಅವರಿಗೆಲ್ಲಾ ಎಷ್ಟೆಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನು ಈಶ್ವರಪ್ಪ(Eshwarappa) ಬಹಿರಂಗ ಪಡಿಸಲಿ ಎಂದು ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, ಉತ್ತರಕನ್ನಡ ಪ್ರದೇಶ (Uttar Pradesh,) ಹಾಗೂ ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಿಜೆಪಿಯವರು ಕಾಂಗ್ರೆಸ್‌ನವರಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವುದನ್ನು ಕೇಳಬೇಕಾಗುತ್ತದೆ. ಉತ್ತರಪ್ರದೇಶದಲ್ಲಿ ಏನು ಅಡ್ಡಮತದಾನವಾಯತ್ತು ಅಲ್ಲಿಎಷ್ಟೆಷ್ಟು ಇನ್ವೆಸ್ಟಮೆಂಟ್(Investment) ಮಾಡಿದ್ದಾರಂತಾ ಕೇಳಬೇಕಾಗುತ್ತದೆ.

ಇದನ್ನೂ ಓದಿ:-

ಈಶ್ವರಪ್ಪನ ಮಾತನ್ನು ಬಿಜೆಪಿಯಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಈ ಹಿಂದೆ ಇದೆ ಈಶ್ವರಪ್ಪ ಏನೆಲ್ಲಾ ಮಾಡಿಕೊಂಡು ರಾಜೀನಾಮೆ ನೀಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತು, ಈಶ್ವರಪ್ಪನವರಿಗೂ ಗೊತ್ತಿದೆ.ರಾಜ್ಯದಲ್ಲಿ ಬಿಜೆಪಿ ಬರುವಾಗ ಈಶ್ವರಪ್ಪ ನಮ್ಮಗೆ ಎಷ್ಟು ಕೋಟಿ ಹಣ (Crore Money) ಕೊಟ್ಟಿದ್ದರು ಅಂತಾ ಹೇಳಬೇಕು. ಮಾತನಾಡಲು ಬರುತ್ತದೆ ಅಂತಾ ಏನಾದ್ರೂ ಮಾತನಾಡಬಾರದು..ಈಶ್ವರಪ್ಪ ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವಾಗ ತಾವು ಗಾಜಿನ ಮನೆಯಲ್ಲಿದ್ದೇವೆ ಎಂದು ಎಚ್ಚರಿಕೆ ವಹಿಸಬೇಕಿರುವುದು ಅವರ ಹಿರಿತನಕ್ಕೆ ಒಳ್ಳೆಯದು…..