suddibindu.in
ಬೆಂಗಳೂರು: ರೇಣುಕಾಸ್ವಾಮಿ ಕೊಲೆಯನ್ನು ಹೃದಯಾಘಾತ ಎಂದು ವರದಿ ಕೊಡುವಂತೆ ಪ್ರಭಾವಿ ರಾಜಕಾರಣಿಯೊಬ್ಬರು ವೈದ್ಯರಿಗೆ 1 ಕೋಟಿ ರೂ. ಆಫರ್ ನೀಡಿದ್ದರು ಎಂಬ ಮಾತುಗಳು ಪೊಲೀಸ್ ಅಧಿಕಾರಿಗಳಿಂದ ಕೇಳಿ ಬಂದಿದೆ.

ದರ್ಶನ್ ಟೀಂ ಕೊಲೆಗೂ ಮುಂಚೆ ಮತ್ತು ನಂತರ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ. ಕೊಲೆಯನ್ನು ಮುಚ್ಚಿಹಾಕಲು ಯೋಜನೆ ಹಾಕಿಕೊಂಡಿದ್ದರು. ಆದರೆ ಪೊಲೀಸರು ಮಾತ್ರ ಹಂತಕರ ದಾರಿ ಸೆರೆ ಹಿಡಿದಿದ್ದಾರೆ. ಇಂಚಿಂಚು ಮಾಹಿತಿಯನ್ನು ಹೊರತೆಗೆಯುತ್ತಿದ್ದಾರೆ. ಅದರಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡ ಇರುವುದು ಕಂಡು ಬಂದಿದೆ. ರೇಣುಕಾಸ್ವಾಮಿ ಕೊಲೆಯನ್ನು ಹೃದಾಯಘಾತ ಎಂದು ವರದಿ ಕೊಡುವಂತೆ ಪ್ರಭಾವಿ ರಾಜಕಾರಣಿ ವೈದ್ಯರಿಗೆ 1 ಕೋಟಿ ರೂ. ಆಫರ್ ನೀಡಿದ್ದರು.

ಇದನ್ನೂ ಓದಿ

ಆದರೆ ವೈದ್ಯರು ಮಾತ್ರ ಇದಕ್ಕೆಲ್ಲ ಒಪ್ಪದೇ ಇದ್ದ ರೀತಿಯಲ್ಲೇ ವರದಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಈ ಕೊಲೆ ಕೇಸ್ನಲ್ಲಿ ಕೈ ಹಾಕಿದ ಪ್ರಭಾವಿ ರಾಜಕಾರಣಿ ಯಾರು ಎಂಬ ಪ್ರಶ್ನೆ ಎಲ್ಲೆಡ ಹರಿದಾಡುತ್ತಿದೆ. ಆದರೆ ಇದಕ್ಕೆಲ್ಲ ಪೊಲೀಸ್ ಅಧಿಕಾರಿಗಳೆ ಉತ್ತರ ನೀಡಬೇಕಿದೆ