ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಲೋಕಸಭಾ ಚುನಾವಣಾ ಸಂರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಇದೀಗ ಉಪಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದಿದೆ. ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಮತದಾರರಿಲ್ಲ ಎನ್ನೂವ ಮೂಲಕ ಮೈತ್ರಿ ಪಕ್ಷ ಜೆಡಿಎಸ್ ದುರ್ಬಲ ಎನ್ನುವ ಅರ್ಥದಲ್ಲಿ ಮಾತ್ನಾಡಿದ್ದಾರೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕರೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಳೆದ ವಿಧಾಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ ಎರಡು ಸಾವಿರ ಮತಗಳನ್ನಷ್ಟೆ ಪಡೆದುಕೊಂಡಿದ್ದು,ಇಲ್ಲಿ ಜೆಡಿಎಸ್‌ಗೆ ಮತದಾರರಲಿವೆಂದು ಮೈತ್ರಿ ಪಕ್ಷದ ಸಂಘಟನೆ ಬಗ್ಗೆ ಟೀಕಿಸಿದ್ದಾರೆ.
ಇನ್ನೂ ಶಾಸಕ ಸತೀಶ್ ಸೈಲ್ ಅವರು ಅಪರಾಧಿ ಅಂತಾ ಘೋಷಣೆ ಆದ ಮೇಲೆ ಆನಂದ ಅಸ್ನೋಟಿಕರ್ ಮೈತ್ರಿ ಅಭ್ಯರ್ಥಿ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೇ ನೀಡಿದ ರೂಪಾಲಿ ನಾಯ್ಕ ಅವರು ಅವರು ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಮೈತ್ರಿಯಲ್ಲಿ ಅವರಿಗೂ ನಮ್ಮಗೂ ಹೊಂದಾಣಿಕೆ ಇಲ್ಲ ಎನ್ನುವ ಅರ್ಥದಲ್ಲಿ ಮಾತ್ನಾಡಿದ್ದು, ರಾಜ್ಯದಲ್ಲಿ ಜೆಡಿಸ್ ಮೈತ್ರಿ ಆಗಿದ್ದರು ಸಹ ಕಾರವಾರ ಕ್ಷೇತ್ರದಲ್ಲಿ ಮಾತ್ರ ಮೈತ್ರಿ ಹೊಂದಾಣಿಕೆ ಸರಿಯಾಗಿಲ್ಲ ಎನ್ನುವುದು ರೂಪಾಲಿ ನಾಯ್ಕ ಅವರ ಹೇಳಿಕೆಯಿಂದ ಗೊತ್ತಾಗುತ್ತಿದೆ.
ಜೆಡಿಎಸ್ ಮೈತ್ರಿಯಲ್ಲೆ ಲೋಕಸಭೆಯಲ್ಲಿ ಬಿಜೆಪಿಗೆ ಗೆಲುವು
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಸೇರಿದಂತೆ ಉತ್ತರಕರ್ನಾಟ ಭಾಗದಲ್ಲಿ ಸಹ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಗೆದ್ದಿದೆ. ಇದನ್ನ ಬಿಜೆಪಿ ನಾಯಕರೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಿರುವಾಗ ಮೈತ್ರಿ ಪಕ್ಷವಾಗಿರು ಜೆಡಿಎಸ ಕಾರವಾರದಲ್ಲಿ ದುರ್ಬಲವಾಗಿದೆ ಎಂದು ರಾಜ್ಯ ಬಿಜೆಪಿ ನಾಯಕಿ ಹೇಳಿಕೆ ನೀಡಿರುವುದು ಜೆಡಿಎಸ್ ನಾಯಕರೇ ಈಗ ಮುಜುಗರಕ್ಕೆ ಒಳಗಾಗುವಂತಾಗಿದೆ.
ಗಮನಿಸಿ