ಸುದ್ದಿಬಿಂದು‌ ಬ್ಯೂರೋ‌ ವರದಿ
ಕಾರವಾರ: ರಾಜ್ಯದಲ್ಲಿ ಶಕ್ತಿ ಯೋಜನೆಯನ್ನ ಯಾವುದೇ ಕಾರಣಕ್ಕೂ‌ ನಿಲ್ಲಿಸುವುದಿಲ್ಲ,ಗ್ಯಾರಂಟಿ ಯೋಜನೆ ಸರ್ಕಾರದ ಹಾಗೂ ಉಪಮುಖ್ಯಮಂತ್ರಿ ಡಿಕೆ‌ ಶಿವಕುಮಾರ್ ಅವರ ಕನಸ್ಸಿನ‌ ಯೋಜನೆಯಾಗಿದೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿಕೆ‌‌ ನೀಡಿದ್ದಾರೆ.

ಅವರು ಇಂದು‌ ಕಾರವಾರದಲ್ಲಿ‌ ಕನ್ನಡ ರಾಜೋತ್ಸವಧ ಧ್ವಜಾರೋಹಣ‌ ಕಾರ್ಯಕ್ರಮದ ಬಳಿಕ‌ ಮಾಧ್ಯಮಗೋಷ್ಠಿಯನ್ನ ಉದ್ದೇಶಿಸಿ ಮಾತ್ನಾಡಿದರು. ಯಾವ ಗ್ಯಾರಂಟಿಯನ್ನೂ ಸರ್ಕಾರ ಬಂದ್ ಮಾಡುವುದಿಲ್ಲ. ಗ್ಯಾರಂಟಿ ಜನರಿಗೆ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಜನರಿಗೆ ಅವಶ್ಯಕತೆ ಇರುವ ಯೋಜನೆ ಬಂದ್ ಮಾಡುವುದಿಲ್ಲ. ಸರ್ಕಾರದ ಬಳಿ ಗ್ಯಾರಂಟಿಗೆ ಹಣದ ಸಮಸ್ಯೆ ಇಲ್ಲ.ಗ್ಯಾರಂಟಿಗಾಗಿ ಬಜೆಟ್ ನಲ್ಲಿ ತಗಲುವುದು ಶೇಕಡಾ 20 ರಷ್ಟು ಹಣ ಮಾತ್ರ, ಉಳ್ಳವರು ಗ್ಯಾರಂಟಿ ಬಿಟ್ಟು ಕೊಡಬೇಕು ಎನ್ನುವುದು ನನ್ನ ಅಭಿಪ್ರಾಯವೂ ಆಗಿದೆ.

ಸರ್ಕಾರಿ ನೌಕರರು,ಅಧಿಕಾರಿಗಳು, ರಾಜಕಾರಣಿಗಳು ಗ್ಯಾರಂಟಿ ಪಡೆಯುತ್ತಿದ್ದಾರೆ. ಸ್ವ ಇಚ್ಚೆಯಿಂದ ಗ್ಯಾರಂಟಿ ಬಿಟ್ಟು ಕೊಡಲಿ, ರಾಜ್ಯದಲ್ಲಿ ಗ್ಯಾರಂಟಿಗೆ ಆರ್ಥಿಕ ಸಮಸ್ಯೆಯೇ ಇಲ್ಲ. ಬೇರೆ ರಾಜ್ಯದಲ್ಲಿ ಹಣದ ಸಮಸ್ಯೆ ಇದ್ದರೆ ಗ್ಯಾರಂಟಿ ಜಾರಿ ಮಾಡುವುದನ್ನ ಗಮನಿಸಿ ಮಾಡಲಿ ಎಂದರು.

ಗಮನಿಸಿ