ಸುದ್ದಿಬಿಂದು ನ್ಯೂಸ್
ಕುಮಟಾ :
ಉತ್ತರ ಕನ್ನಡ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೇಳಲಾಗುತ್ತಿರುವ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಮನೆಮನೆ ಪ್ರಚಾರ ಭರದಿಂದ ಸಾಗುತ್ತಿದ್ದು, ಅಸೂಯೆಗೊಂಡ ಬಿಜೆಪಿಗರು “ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಆರಿಸಿ ಬಂದರೆ ಕ್ಷೇತ್ರದಲ್ಲಿ ಗೂಂಡಾಗಿರಿ ಹೆಚ್ಚುತ್ತದೆ” ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಾಸಕನ ಸಹೋದರರು ಗೂಂಡಾಗಿರಿ ಮಾಡಿದ ಪೇಪರ್ ಕಟ್ಟಿಂಗ್ ಒಂದು ವೈರಲ್ ಆಗಿದ್ದು, ಇದರಿಂದಾಗಿ ಬಿಜೆಪಿಗರಿಗೆ ಮುಖಭಂಗವಾದಂತಾಗಿದೆ.

ಬಿಜೆಪಿಗರು ಪ್ರಚಾರಕ್ಕೆ ಹೋದಲೆಲ್ಲ ತಮ್ಮ ಸರ್ಕಾರದ ಘನ ಸಾಧನೆ ಹೇಳಿಕೊಳ್ಳುವ ಬದಲು ಜೆಡಿಎಸ್ ಆರಿಸಿ ಬಂದರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಅಪಪ್ರಚಾರ ಮಾಡುವುದರಲ್ಲೇ ನಿರತರಾಗಿದ್ದಾರೆ. ಇವರಿಗೆ ತಮ್ಮ ಸಾಧನೆ ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಬಿಜೆಪಿಗರು ಐದು ವರ್ಷದಲ್ಲಿ ಕಷ್ಟಪಟ್ಟು ಜನರ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ನನಸು ಮಾಡಿದಿದ್ದರೆ ಅದರ ಉದ್ಘಾಟನೆಗೆ ಖುದ್ದು ಮೋದಿಜೀ ಮತ್ತು ಯೋಗಿಜೀ ಬರುತ್ತಿದ್ದರು” ಎಂದು ಕ್ಷೇತ್ರದ ಮತದಾರರು ವ್ಯಂಗ್ಯವಾಡುತ್ತಿದ್ದಾರೆ.

“ಒಟ್ಟಾರೆ ಕ್ಷೇತ್ರದಲ್ಲಿ ಬಿಜೆಪಿಗರ ಸ್ಥಿತಿ ಏನೋ ಮಾಡಲು ಹೋಗಿ ಮತ್ತೆನೋ ಮಾಡದಂತಾಗಿದೆ’ ಎಂದು ಜನರೇ ಹೇಳುತ್ತಿದ್ದಾರೆ.