ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕರ್ನಾಟಕ ನಿವೃತ್ತ ನೌಕರರ ವೇದಿಕೆ ಉತ್ತರ ಕನ್ನಡದ ನಿವೃತ್ತರು 7ನೇ ವೇತನ ಆಯೋಗ ದ ವರದಿ ಅನುಷ್ಠಾನದಲ್ಲಿ ಜುಲೈ 2024ರ ಅವಧಿಯಲ್ಲಿ ನಿವೃತ್ತ ರಾದ /ನಿಧ ರಾದ ನೌಕರರಿಗೆ ಡಿ ಸಿ ಆರ್ ಜಿ, ಕಮ್ಯುಟೆಸನ್, ಗಳಿ ಕೆರಜೆ ಸೌಲಭ್ಯ ಪಡೆಯುವಲ್ಲಿ ಉಂಟಾದ ಆರ್ಥಿಕ ಹಾನಿಯ ಕುರಿತಾಗಿ ನಿವೃತ್ತ ನೌಕರರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.

ದಿನಾಂಕ 23-09-2024 ರಂದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಸಚಿವರು ಈ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರುವದಾಗಿ ಭರವಸೆ ನೀಡಿರುತ್ತಾರೆ ಮನವಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರದ ಬಿ. ಡಿ ನಾಯ್ಕ, ಉಲ್ಲಾಸ ನಾಯ್ಕ,ಹಾಗೂ ವೇದಿಕೆಯ ಪ್ರಮುಖರಾದ ವಿ . ಡಿ ಮೊಗೇರ, ವಸಂತ ಭಂಡಾರಿ, ಶಂಕರ ಹರಿಕಂತ್ರ, ಹಾಗೂ ಉತ್ತರ ಕನ್ನಡ ಜಿಲ್ಲೆಯ ನಿವೃತ್ತ ನೌಕರರು ಹಾಜರಿದ್ದರು

ಗಮನಿಸಿ