suddibindu.in
ಕಾರವಾರ; ಕಳೆದ ವರ್ಷದ ಗಣಪತಿ ಹಬ್ಬದ ಲೆಕ್ಕಾರದಿಂದ ಆರಂಭವಾದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ವ್ಯಕ್ತಿಯೊರ್ವನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಸಾಯಿಕಟ್ಟಾದಲ್ಲಿ ನಡೆದಿದೆ.
ಸಂದೇಶ ಪ್ರಭಾಕರ ಬೋರ್ಕರ್(31) ಚಾಕು ಇರಿತಕ್ಕೆ ಒಳಗಾಗಿ ಕೊಲೆಯಾದ ವ್ಯಕ್ತಿ. ಗಣೇಶ ಹಬ್ಬವಾಗಿದ್ದರಿಂದ ಸಾಯಿಕಟ್ಟಾದಲ್ಲಿರುವ ಮೂಲ ಮನೆಯಲ್ಲಿ ಕುಟುಂಬದವರೆಲ್ಲರೂ ಸೇರಿದ್ದರು. ಕಳೆದ ವರ್ಷದ ಹಬ್ಬದ ಖರ್ಚಿನ ವಿಚಾರದಲ್ಲಿ ಮನೆಯಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಚಾಕುವಿನಿಂದ ಪ್ರಭಾಕರ್ ಅವರ ಸಹೋದರಿಯ ಮಕ್ಕಳು ಸಂದೇಶನಿಗೆ ಇರಿದಿದ್ದಾರೆ. ಎದೆಯ ಭಾಗಕ್ಕೆ ಚಾಕುವಿನಿಂದ ಇರಿದ ಕಾರಣ ಗಾಯಗೊಂಡ ಆತನನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಇನ್ನೊರ್ವನಿಗೆ ಚಿಕಿತ್ಸೆ ನೀಡಲಾಗಿದೆ.
ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ