ಹಳಿಯಾಳ : ದಿನದದಿಂದ ದಿನಕ್ಕೆ ಚುನಾವಣಾ ಕಾವು ಜೋರಾಗುತ್ತಿದ್ದು, ಪಟ್ಟಣದ ಬೂತ್ ನಂಬರ್ 97ರ ದೇಶಪಾಂಡೆ ನಗರದಲ್ಲಿ ಮಹಿಳಾ ಮೋರ್ಚಾದಿಂದ ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ ಅವರ ಪತ್ನಿ ಸುವರ್ಣ ಸುನಿಲ್ ಹೆಗಡೆ ಪತಿ ಪರಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ.
ಪಕ್ಷದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅವರು. ಸುನಿಲ್ ಹೆಗಡೆಯವರು ಕಳೆದ ಬಾರಿ ಸೋತರು ಸಹ ಕ್ಷೇತ್ರದ ಮತದಾರನ್ನ ಮರೆತಿಲ್ಲ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡು ಜನಸೇವೆಯನ್ನು ಮಾಡುತ್ತಾ ಬಂದಿದ್ದಾರೆ ಆದ್ದರಿಂದ ಅವರನ್ನು ಈ ಬಾರಿ ಎಲ್ಲರೂ ಒಟ್ಟಾಗಿ ಶಾಸಕರನ್ನಾಗಿ ಮಾಡಬೇಕಿದೆ ಎಂದರು.
ಈ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟಿದೆ. ಸುನೀಲ್ ಹೆಗಡೆ ಅವರು ಶಾಸಕರಾದರೆ ಹಳಿಯಾಳದಲ್ಲಿ ಟೆಕ್ಸ್ಟೈಲ್ ಪಾರ್ಕ್ ಮಾಡುವ ಮೂಲಕ 10 -15 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವಂತಹ ಹಲವಾರು ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಜನರ ಆರೋಗ್ಯ ದೃಷ್ಟಿಯಿಂದ ಹಳಿಯಾಳದಲ್ಲಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯನ್ನು ತೆರೆಯಲಾಗುವುದು, ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಸುವರ್ಣ ಹೆಗಡೆ ಹೇಳಿದ್ದರು.
ಈ ಸಂದರ್ಭದಲ್ಲಿ ಸುವರ್ಣ ಸುನಿಲ್ ಹೆಗಡೆ ಅವರಿಗೆ ರಾಧಿಕಾ ಕಮ್ಮಾರ್ ಹಾಗೂ ಅಕ್ಕುಬಾಯಿ ಗಣೇಶ್ ರಾಠೋಡ್ ಅವರು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯರಾದ, ರಾಜೇಶ್ವರಿ ಹಿರೇಮಠ,ಸಂಗೀತಾ ಜಾದವ್, ಮಾಲಾ ಹುಂಡೆಕರ್, ರತ್ನಮಾಲಾ ಮೂಳೆ, ಗಣೇಶ್ ರಾಠೋಡ್, ಕುಮಾರಸ್ವಾಮಿ, ದೇವೇಂದ್ರ ಕಮ್ಮಾರ್, ನಾಗರಾಜ್ ಪಾಟೀಲ್, ಮಂಜು ಕುರಟ್ಟಿ,ಪಕ್ಷದ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.