suddibindu.in
ಕುಮಟಾ : ಕೊಂಕಣ ರೈಲ್ವೆ ಮಾರ್ಗದ ಹಳಿಯಲ್ಲಿ ವೆಡ್ಡಿಂಗ್ ಬಿಟ್ಟು ರೈಲು ಹಳಿ ತಪ್ಪಿ ಸಾವಿರಾರು ಮಂದಿ ದುರಂತಕ್ಕೆ ಸಿಲುಕುವ ಸಾಧ್ಯತೆ ಇತ್ತು. ಇದನ್ನ ಗಮನಿಸಿ ರೈಲ್ವೆ ಹಳಿ ನಿರ್ವಹಣೆ ನೋಡಿಕೊಳ್ಳುವ (ಟ್ರಾಕ್ ಮ್ಯಾನ್ ಮಹಾದೇವ ನಾಯ್ಕ ಮಾಹಾದುರಂತವೊಂದನ್ನ ತಪ್ಪಿಸಿದ್ದಾರೆ. ಸರಿಸುಮಾರು 500ಮೀಟರ ದೂರ ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ಮಹಾದುರಂತವೊಂದನ್ನ ತಪ್ಪಿಸಿರುವ ಘಟನೆ ಕುಮಟಾ ಹೊನ್ನಾವರ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಬೆಳಿಗ್ಗಿನ ಜಾವ ಸುಮಾರು 5ಗಂಟೆ ಸುಮಾರಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲು ಅದೆ ಮಾರ್ಗವಾಗಿ ಬರುತ್ತಲಿತ್ತು. ಈ ರೈಲು ತಿರುವನಂತಪುರದಿಂದ ನವದೆಹಲಿ ಕಡೆ ಹೋಗುತ್ತಿತ್ತು. ಈ ರೈಲನ್ನು ಹೊನ್ನಾವರದಲ್ಲೆ ನಿಲ್ಲಿಸುವಂತೆ ಸ್ಟೇಶನ್ ಮಾಸ್ತರಿಗೆ ಪೋನ್ ಮಾಡಿದ್ದ ಆದರೆ ಆಗಲೆ ಈ ರೈಲು ಹೊನ್ನಾವರ ಸ್ಟೇಶನ್‌ನಿಂದ ಬಿಡಲಾಗಿತ್ತು. ಇನ್ನೇನು ಕೆಲ ನಿಮಿಷಗಳು ಆದರೆ ರೈಲು ದುರಂತ ಉಂಟಾಗುವ ಎಲ್ಲಾ ಸಾಧ್ಯತೆಗಳು ಎದುರಾಗಿತ್ತು.
ಮಹಾದೇವ ತಕ್ಷಣ ಹಳಿ ವೆಡ್ಡಿಂಗ್ ಬಿಟ್ಟ ಸ್ಥಳದಿಂದ 500ಮೀಟರ್ ದೂರು ಓಡಿ ಹೋಗಿ ಎದುರಿಗೆ ಬರುತ್ತಿದ್ದ ರೈಲಿಗೆ ಕೆಂಪುಬಾವುಟ ತೋರಿಸಿ ಅಲ್ಲೆ ರೈಲು ನಿಲ್ಲುಗಡೆ ಮಾಡಿಸಿದ್ದಾನೆ. ಮೂಲಕ ಮಹಾದೇವ ಸಾವಿರಾರು ಜನರ ಪ್ರಾಣವನ್ನ ಉಳಿಸಿದ್ದಾನೆ ಈತನ ಸಮಯ ಪ್ರಜ್ಞೆಗೆ ರೈಲ್ಬೆ ಇಲಾಖೆಯಿಂದ ಸನ್ಮಾನಿಸಲಾಗಿದ್ದು, ಸಾರ್ವಜನಿಕರಿಂದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ