ಸುದ್ದಿಬಿಂದು ಬ್ಯೂರೋ
ಕುಂದಾಪುರ
: ವಿದ್ಯಾರ್ಥಿನಿ ಓರ್ವಳನ್ನ ಹಿಂಬಾಲಿಸಿ ಆಕೆಗೆ ಚುಡಾಯಿಸಿದ ರೋಡ್ ರೋಮಿಯೋ ಯುವಕನಿಗೆ ವಿದ್ಯಾರ್ಥಿನಿ ಚಪ್ಪಲಿ ಪೂಜೆ ಮಾಡಿರುವ ಘಟನೆ ವಕ್ವಾಡಿ ರಸ್ತೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಓರ್ವಳು ಹಾಸ್ಟೆಲ್ಬ ನಿಂದ ಕಾಲೇಜಿಗೆ ಹೋಗುತ್ತಿದ್ದು, ಈ ವೇಳೆ ಆಕೆಯನ್ನ ಹಿಂಬಾಲಿಸಿದ ಕಾಮುಕ ಯುವಕ ಬಾರ್ಕೂರು ಮೂಲದ ವ್ಯಕ್ತಿ ಎಂದು ಗೋತ್ತಾಗಿದೆ. ಈತ ವಿದ್ಯಾರ್ಥಿನಿಗೆ ಚುಡಾಹಿಸಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ್ದಾನೆ. ಆತ ಮಳ್ಳಾಟ ನೋಡಿ ಸಹಿಸಿಕೊಳ್ಳಲಾಗದ ಯುವತಿ ತನ್ನ ಕಾಲಿಗೆ ಇದ್ದ ಚಪ್ಪಲಿ ತೆಗೆದೆ ಆತನಿಗೆ ರಸ್ತೆಯಲ್ಲಿಯೆ ಹಿಗ್ಗಾಮುಗ್ಗಾ ಹೊಡೆಯುವ ಮೂಲಕ ಯುವಕ ನೆತ್ತಿಗೆ ಏರಿದ ಕಾಮದ ನಶೆಯನ್ನ ಇಳಿಸಿದ್ದಾಳೆ.

ಬಳಿಕ ಯುವಕನಿಗೆ ಯುವತಿ ಚಪ್ಪಲಿಯಿಂದ ಹೊಡೆಯುತ್ತಿರುವುದನ್ನ ಗಮನಿಸಿ ಸ್ಥಳೀಯರು ಸ್ಥಳಕ್ಕೆ ಬಂದು ವಿದ್ಯಾರ್ಥಿನಿ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದು ಅವರು ಕಾಮುಕ ಯುವಕನಿಗೆ ಪೆಟ್ಟು ಹಾಕಿ. ಪೊಲೀಸರಿಗೆ ಒಪ್ಪಿಸಿದ್ದಾರೆ.