ಸುದ್ದಿಬಿಂದು ಬ್ಯೂರೋ
ಶಿರಸಿ :
ಎರಡು ಲಾರಿಯಲ್ಲಿ ಅಕ್ರಮವಾಗಿ ನಾಟವನ್ನ ಖಾಸಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ‌ಇಲಾಖೆಯ ಅಧಿಕಾರಿ ನಾಲ್ಬರು ಆರೋಪಿಗಳನ್ನ ಬಂಧಿಸಿ ಎರಡು ‌ಲಾರಿಯನ್ನ ವಶಕ್ಕೆ ಪಡೆದುಕೊಂಡಿರುವ ಘಟನೆ ನಗರದಲ್ಲಿ‌ ನಡೆದಿದೆ.

ಕಲ್ಲಪ್ಪ ಬಸಪ್ಪಕೇಂಗಾಪುರ,ಹೈದತ್ ಅಲಿ ಮಹಮ್ಮದ್ ಹನೀಫ ಫಾರಿ,ಗುಲಾಮ ಹುಸೇನ್ ‌ಮಹ್ಮದ್ ಸೂಹೇಲ್ ಬಂಧಿತ ಆರೋಪಿಗಳಾಗಿದ್ದಾರೆ.

ಎರಡು ಲಾರಿಯಲ್ಲಿ ಅಕ್ರಮವಾಗಿ ನಾಟ ಸಾಗಾಟ ಮಾಡಲಾಗುತ್ತಿದ್ದೆ ಎನ್ನುವ ಬಗ್ಗೆ ಖಚಿತ ಮಾಹಿತಿಯನ್ನ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿ ಸಿ ಎಫ್ ವಸಂತ ರೆಡ್ಡಿ,ಡಿಎಫ್ ಓ, ಅಜ್ಜಯ್ಯ , ಎಸಿಎಫ್ ಅಶೋಕ ಅಲಗೂರ ಅವರುಗಳ‌ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.
ಶಿರಸಿ ಆರ್ ಎಫ್ ಓ ಶಿವಾನಂದ ನಿಂಗಾಣಿ ಹಾಗೂ ಸಿಬ್ಬಂದಿಗಳು ಈ ದಾಳಿ‌ ನಡೆಸಿದ್ದು, 50 ಲಕ್ಷಕ್ಕೂ ಅಧಿಕ ಮೌಲ್ಯದ ನಾಟ ಹಾಗೂ ಎರಡು ಲಾರಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಶಿರಸಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.